

ದಾವಣಗೆರೆ : ಪಿಯುಸಿ ನಂತರ ಸಾವಿರಾರು ಅವಕಾಶಗಳಿವೆ. ಓದು ಮುಗಿದ ಮೇಲೆ ಗುರಿಯ ಬಗ್ಗೆ ಯೋಚಿಸದೇ ಮೊದಲೇ ನಿರ್ಧಾರ ಮಾಡಬೇಕು ಎಂದು ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ಯೂಸುಫ್ ಮಲಿಕ್ ದಮನಿ ಹೇಳಿದರು.
ನಗರದ ಜಿಎಂ ಫಾರ್ಮಸಿ ಕಾಲೇಜಿನಲ್ಲಿ ಬುಧವಾರ ಪಿ.ಯು.ಸಿ. ನಂತರ ವಿದ್ಯಾಭ್ಯಾಸದ ಅವಕಾಶಗಳು ಕುರಿತ ಪ್ರೇರಕ ಅಧಿವೇಶನದಲ್ಲಿ ಮಾತನಾಡಿ, ಜೀವನದಲ್ಲಿ ಮನದಲ್ಲಿ ಗುರಿಯನ್ನು ನಿರ್ಧರಿಸಿಕೊಂಡು ಅದನ್ನು ತಲುಪಲು ಯತ್ನಿಸಬೇಕೇ ಹೊರತು ಬೇರೆಯವರ ಪ್ರೇರಿತ ಗುರಿಯನ್ನು ಹಿಂಬಾಲಿಸಬಾರದು ಎಂದು ಸಲಹೆ ನೀಡಿದರು.
ಕೆ.ಎಸ್. ಕೇಶ್ವ ಮಾತನಾಡಿ ಜೀವನದಲ್ಲಿ ವೈಫಲ್ಯದ ಸನ್ನಿವೇಶವನ್ನು ಸಕಾರಾತ್ಮಕವಾಗಿ ಎದುರಿಸಬೇಕು. ಯಾವುದೇ ನಿರ್ಧಾರವನ್ನು ಒತ್ತಡದಲ್ಲಿ ಕೈಗೊಳ್ಳಬಾರದು ಎಂದು ತಿಳಿಸಿದರು.
ಪಿಯುಸಿ ನಂತರ ಹಲವಾರು ವೃತ್ತಿಗಳ ಅವಕಾಶವನ್ನು ಹಾಗೂ ಪದವಿ, ಮೆಡಿಕಲ್, ಇಂಜಿನಿಯರಿಂಗ್, ಅಗ್ರಿಕಲ್ಚರ್, ಫಾರ್ಮಸಿ ಮುಂತಾದ ವಿಭಾಗಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಯಾವುದೇ ವೃತ್ತಿ ಕೌಶಲ ಹಾಗೂ ವೃತ್ತಿ ನಿರ್ಧಾರಿತ ಸಮಸ್ಯೆಗಳಿದ್ದರೆ ನಮ್ಮ ಕಾಲೇಜು ಯಾವತ್ತೂ ಸಂವಹನ ಮಾಡಲು ಯತ್ನಿಸುತ್ತದೆ ಎಂದರು.
ಫಾರ್ಮ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾದ ಡಾ. ನಿರ್ಮಲ ಟಿ. ಹಾವಣ್ಣವರು ಮಾತನಾಡಿ ಜೀವನದ ಪ್ರಮುಖ ಬದಲಾವಣೆಗೆ ನಮ್ಮ ಕಾಲೇಜು ಮೂಲ ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವಿದ್ವತ್ ಪಿಯು ಅಕಾಡೆಮಿಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಹಮ್ಮದ್ ಶೌಕತ್ ಅಲಿ ಇದ್ದರು.