ಜಿಎಂಯು ವಿದ್ಯಾರ್ಥಿಗಳ ತಂಡಕ್ಕೆ ತೃತೀಯ ಸ್ಥಾನ

dvg-gmu_20250930234527023.jpg
Published on

ದಾವಣಗೆರೆ : ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಸಹಯೋಗದೊಂದಿಗೆ ಅಗಮ್ಯಾ ಸೈಬರ್ ಟೆಕ್ ಇತ್ತೀಚೆಗೆ ಆಯೋಜಿಸಿದ್ದ ಅಗಮ್ಯಾ ಟೆಕ್ ಶೃಂಗಸಭೆ 2025 ರಲ್ಲಿ ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದ ಎರಡನೇ ಸೆಮಿಸ್ಟರ್ ಎಂಸಿಎ ವಿದ್ಯಾರ್ಥಿಗಳ ತಂಡವು ತೃತೀಯ ಸ್ಥಾನ ಪಡೆದಿದೆ.  ಜಿಎಂಯು ಪ್ರತಿನಿಧಿಗಳಾಗಿ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ್ ಎಸ್. ಕೊಲ್ಲರ್, ರಚನಾ ಜಾಧವ್ ಮತ್ತು ರೀತು ಭಾಗವಹಿಸಿದ್ದರು. 130 ತಂಡಗಳು ಭಾಗವಹಿಸಿದ್ದ ಟೆಕ್ ಶೃಂಗ ಸಭೆಯಲ್ಲಿ ಜಿಎಂಯು ತಂಡವು ತಮ್ಮ ಕೌಶಲಗಳನ್ನು ಪ್ರದರ್ಶಿಸಿ, 10 ಸ್ಥಾನಗಳಲ್ಲಿ 3ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ.  ವಿದ್ಯಾರ್ಥಿಗಳ ಈ ಸಾಧನೆಯ ಬಗ್ಗೆ ಜಿಎಂಯು ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಸುನಿಲ್ ಕುಮಾರ್ ಬಿ.ಎಸ್, ಜಿಎಂಯು ಫ್ಯಾಕಲ್ಟಿ ಆಫ್ ಕಂಪ್ಯೂಟಿಂಗ್ ಆ್ಯಂಡ್ ಐಟಿ (ಎಫ್ ಸಿಐಟಿ) ವಿಭಾಗದ ಡೀನ್ ಡಾ. ಶ್ವೇತಾ ಮರಿಗೌಡರ್, ಜಿಎಂಎಸ್ ಅಕಾಡೆಮಿಯ ಎಎಒ ಜಿ.ಜೆ. ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net