ಜೈನ ತೀರ್ಥಂಕರರ ವಿಗ್ರಹಗಳ ಪತ್ತೆ

dvg-statue.jpg
Published on

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕು ಬಸವಾಪಟ್ಟಣ ಗ್ರಾಮದ ಜಮೀನಿನಲ್ಲಿ ವರ್ಷದ ಹಿಂದೆ ಪತ್ತೆಯಾಗಿದ್ದ ಜೈನ ತೀರ್ಥಂಕರರಾದ ಭಗವಾನ್ ಶ್ರೀ ಆದಿನಾಥ ಜಿ ಮತ್ತು ಭಗವಾನ್ ಶ್ರೀ ನೇಮಿನಾಥ ಜಿ ಅವರ ವಿಗ್ರಹಗಳನ್ನು ದಾವಣಗೆರೆಯ ಗೌತಮ್ ಜೈನ್ ಮತ್ತು ಗೆಳೆಯರು ಪುನರುಜ್ಜೀವನಗೊಳಿಸಿ ಅಲ್ಲಿ ಜಿನಾಲಯವಿಂದನ್ನು ನಿರ್ಮಿಸಿದ್ದಾರೆ.  ಹಾಲಸಿದ್ದಪ್ಪ ಎಂಬ ರೈತರ ಜಮೀನಿನಲ್ಲಿ ಈ ಪ್ರಾಚೀನ ವಿಗ್ರಹಗಳು ಇರುವುದರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ತಂಡವು ವಿಗ್ರಹಗಳನ್ನು ಭೂಮಿಯಿಂದ ಯಶಸ್ವಿಯಾಗಿ ಹೊರತೆಗೆದರು.  ಅವುಗಳನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಿದ ನಂತರ, ಸಮುದಾಯದ ಸದಸ್ಯರ ಸಹಾಯದಿಂದ ಸಣ್ಣ, ಸುಂದರವಾದ ದೇವಾಲಯವನ್ನು ನಿರ್ಮಿಸಿದರು.  ಈ ವಿಗ್ರಹಗಳು 800 ರಿಂದ 1 ಸಾವಿರ ವರ್ಷಗಳಷ್ಟು ಹಳೆಯದಾಗಿವೆ. ಈ ಹಿಂದೆ ಅಲ್ಲಿ ದೇವಸ್ಥಾನ ಇದ್ದಿರಬಹುದು, ಕಾಲಾಂತರದಲ್ಲಿ ಭೂಮಿಯಲ್ಲಿ ಹುದುಗಿ ಹೋಗಿರಬಹುದು ಎಂದು ವಿಗ್ರಹಕ್ಕೆ ಕಾಯಕಲ್ಪ ನೀಡಿದ ತಂಡದ ಗೌತಮ್ ಜೈನ್ ಹೇಳಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net