ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಶುರು

dvg sslc july 13
Published on

ದಾವಣಗೆರೆ: ವಿರೋಧದ ನಡುವೆಯೂ, ಕೋವಿಡ್ ಭಯದಲ್ಲೇ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ, ಸೋಮವಾರದಿಂದ ಆರಂಭವಾಗಿದೆ.

ನಗರದ ರಾಜನಹಳ್ಳಿ ಸೀತಮ್ಮ ಸರ್ಕಾರಿ ಶಾಲೆ, ಬಾಲಕರ ಸರ್ಕಾರಿ ಪ್ರೌಢಶಾಲೆ, ಸಿದ್ಧಗಂಗಾ, ಡಿಆರ್‌ಆರ್, ವಿದ್ಯಾನಗರದ ಮಾಗನೂರು ಬಸಪ್ಪ, ಸೇಂಟ್‌ಪಾಲ್ಸ್ ಶಾಲೆಯ ಒಟ್ಟು 6 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ.

ಒಟ್ಟು 1973 ಮೌಲ್ಯಮಾಪಕರು, 6ಮಂದಿ ಉಪ ಮುಖ್ಯ ಮೌಲ್ಯಮಾಪಕರನ್ನು ನಿಯೋಜಿಸಲಾಗಿದ್ದು ಸೋಮವಾರ, 1684 ಮಂದಿ ಮೌಲ್ಯಮಾಪಕರು ಹಾಜರಾದರು. 55 ವರ್ಷ ಮೇಲ್ಪಟ್ಟವರಿಗೆ ವಿನಾಯ್ತಿ ನೀಡಲಾಗಿದ್ದರೂ ಕೆಲವರು ಭಾಗಿಯಾದರು. 289 ಮಂದಿ ಗೈರಾಗಿದ್ದರು ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net