ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ರಲ್ಲಿ 624 ಅಂಕ ಪಡೆದ ವಿದ್ಯಾರ್ಥಿನಿ

dvg-Mubashera-Banu-sslc.jpg
Published on

ದಾವಣಗೆರೆ  : ಸ್ವದೇಶಿ ಎಜುಕೇಶನಲ್ ಆ್ಯಂಡ್ ವಾಲಂಟರಿ ಅಸೋಸಿಯೇಷನ್ ಅಡಿಯಲ್ಲಿ ನಡೆಯುತ್ತಿರುವ, ಚನ್ನಗಿರಿ ತಾಲೂಕು ನವಿಲೇಹಾಳ್ ಗ್ರಾಮದ ಇಂಡಿಯನ್ ಗ್ರೀನ್‌ವೀವ್ ಪ್ರೌಢಶಾಲೆಯ ವಿದ್ಯಾರ್ಥಿನಿ ಮುಬಷ್ಷಿರಾ ಬಾನು, ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ರಲ್ಲಿ 625ಕ್ಕೆ 624 ಅಂಕಗಳನ್ನು ಪಡೆದು, ದಾವಣಗೆರೆ ಜಿಲ್ಲೆಗೆ ಮೊದಲ ರ‌್ಯಾಂಕ್ ಹಾಗೂ ರಾಜ್ಯಮಟ್ಟದಲ್ಲಿ ಎರಡನೇ ರ‌್ಯಾಂಕ್ ಪಡೆದಿದ್ದಾಳೆ.  ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎ. ಜಾಕೀರ್ ಹುಸೇನ್, ಮುಖ್ಯ ಶಿಕ್ಷಕ ಎಂ. ಮಹಮದ್ ಷಫಿವುಲ್ಲಾ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net