ಕೇವಲ ಕನಸುಗಾರರಾಗದೇ ಸಾಧಕರಾಗಿ

dvg guru poornime july 8
Published on

ದಾವಣಗೆರೆ: ನಾವು ಕೇವಲ ಕನಸುಗಾರರಾಗದೇ ಉತ್ತಮ ಕೆಲಸಗಳ ಮೂಲಕ ಸಾಧಕರಾಗಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ದೊಡ್ಡಬಾತಿ ಗ್ರಾಮದ ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ತಪಸ್ಸಿರುವ ಕಡೆ ಕಾರ್ಯಸಿದ್ಧಿಯಾಗುತ್ತವೆ. ಮನೆಯಲ್ಲಿ ಯಾವಾಗಲೂ ಆನಂದ ತುಂಬಿರಬೇಕು. ಮಕ್ಕಳಿಗೆ ಆಸ್ತಿ ಮಾಡಬೇಡಿ, ಅವರಿಗೆ ಒಳ್ಳೆಯ ಬುದ್ಧಿ, ವಿದ್ಯೆ, ವಿನಯ, ಸಂಸ್ಕಾರ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ತಿಳಿಸಿದರು.

ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ, ತಪೋವನ ಸಂಸ್ಥೆಯ ಚೇರ್ಮನ್ ಡಾ. ಶಶಿಕುಮಾರ್ ಮೆಹರ‌್ವಾಡೆ, ಜಯಲಕ್ಷ್ಮಿ ಶಶಿಕುಮಾರ್ ಮೆಹರ‌್ವಾಡೆ, ನಿವೃತ್ತ ಪ್ರಾಂಶುಪಾಲ ಡಾ.ಎಸ್.ಎಚ್. ಪ್ಯಾಟಿ, ಡಿ. ಹೇಮಂತ್, ಡಾ. ಗಂಗಾಧರ ವರ್ಮಾ, ಡಾ. ಸುಮನ್ ಭಟ್, ಡಾ. ಶ್ರೀಕಾಂತ್, ಹರಿಹರ ಪಿ.ಎಸ್.ಐ. ಶೈಲಶ್ರೀ, ರೂಪಾ ಕಾಟ್ವೆ, ಗೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net