

ದಾವಣಗೆರೆ : ಸೆ. 3 ಮತ್ತು 4 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಸುಸ್ಥಿರ ಅಭಿವೃದ್ಧಿ-2025ರ ಕುರಿತ 22ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದ ಪ್ರಾಧ್ಯಾಪಕ ಮತ್ತು ಡೀನ್ ಡಾ. ಆರ್. ಶಶಿಧರ್ ಹಾಗೂ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮತ್ತು ಅಧ್ಯಕ್ಷ ಡಾ. ಅಶೋಕ್ ಕುಮಾರ್ ವೀ. ಪಾಳೇದ ಅವರು ಸಮ್ಮೇಳನ ಸಹ-ಅಧ್ಯಕ್ಷರಾಗಿ ಮತ್ತು ಪ್ರಬಂಧ ಮಂಡನೆ ಮಾಡಲು ಭಾಗವಹಿಸುತ್ತಿದ್ದಾರೆ. ರಾಜ್ಯಶಾಸ್ತ್ರ ವಿಭಾಗದ ಸಂಶೋಧನಾರ್ಥಿಗಳಾದ ದೀಪಿಕಾ ರಾಣಿ ಲೊಕರೆ, ಚಂದ್ರಪ್ಪ ಎಸ್.ಎಚ್. ಹಾಗೂ ನವೀನ್ ಕುಮಾರ್ ಬಿ.ಟಿ ಮತ್ತು ಎಂ.ಬಿ.ಎ. ವಿಭಾಗದ ಸಂಶೋಧನಾರ್ಥಿಗಳಾದ ಗಿರೀಶ್ ಹಿರೇಮಠ, ಸ್ನೇಹಲ್ ಕಾಡದೇವರ ಮಠ, ಕೃಷ್ಣ ಸುರಪುರ, ಪೂಜಾ ಪಿ.ಆರ್. ಹಾಗೂ ವೇಣುಗೋಪಾಲ ಅವರು ಸುಸ್ಥಿರ ಅಭಿವೃದ್ಧಿ-2025 ಕುರಿತಂತೆ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಈ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ, ಕುಲಸಚಿವ ಎಸ್.ಬಿ. ಗಂಟೆ ಹಾಗೂ ಎರಡೂ ವಿಭಾಗಗಳ ಅಧ್ಯಾಪಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.