ಮನು ಬಾಕರ್‌ಗೆ ಕಾಂಗ್ರೆಸ್ ಸಂಸದರಿಂದ ಅಭಿನಂದನೆ

DVG-PRABHA.jpg
Published on

ದಾವಣಗೆರೆ : ಭಾರತೀಯ ಮಹಿಳಾ ಶೂಟರ್ ಮನು ಬಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಪಡೆದ ಹಿನ್ನೆಲೆಯಲ್ಲಿ  ಶುಕ್ರವಾರ ಲೋಕಸಭೆ ವಿಪಕ್ಷ ನಾಯಕ ರಾಹುಲ್ಗಾಂಧಿ ನೇತೃತ್ವದಲ್ಲಿ, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೇರಿ ಕಾಂಗ್ರೆಸ್ ಸಂಸದರು ಅಭಿನಂದಿಸಿದರು.  ದೇಶದ ಹೆಮ್ಮೆಯ ಕ್ರೀಡಾಪಟು ಒಲಿಂಪಿಕ್ಸ್‌ನಲ್ಲಿ ಮಾಡಿರುವ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಂಸದರು, ಮನು ಬಾಕರ್ ಅವರ ಭವಿಷ್ಯದ  ಕ್ರೀಡಾ ಜೀವನಕ್ಕೆ ಶುಭ ಹಾರೈಸಿದರು.      

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net