

ದಾವಣಗೆರೆ : ಕೊಪ್ಪಳದಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದಾವಣಗೆರೆ ಕ್ಲಾಸಿಕ್ ತಂಡವು ಪ್ರಶಸ್ತಿ ಪಡೆದುಕೊಂಡಿತು.
ತಂಡದ ಆಟಗಾರರಾದ ಟಿ. ಕುಮಾರಸ್ವಾಮಿ, ಮಧುಸೂದನ್, ಮಂಜುನಾಥ್, ಚಂದ್ರಶೇಖರ್, ಬಸವರಾಜ್, ಅರುಣ್ ರಾಯ್ಕರ್, ಶಿವಕುಮಾರ್ ಉತ್ತಮ ಪ್ರದರ್ಶನ ನೀಡಿ ಟ್ರೋಫಿಯನ್ನು ಎತ್ತಿ ಹಿಡಿದರು. ಟೂರ್ನಿಯಲ್ಲಿ 25 ತಂಡಗಳು ಭಾಗವಹಿಸಿದ್ದವು.
ಕ್ರೀಡಾಪಟುಗಳ ಈ ಸಾಧನೆ ಬಗ್ಗೆ ದಾವಣಗೆರೆ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಹಿರಿಯ ಆಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.