ಬಾಲ್ ಬ್ಯಾಡ್ಮಿಂಟನ್, ದಾವಣಗೆರೆ ಜಿಲ್ಲಾ ಮಹಿಳಾ ತಂಡ ಪ್ರಥಮ

IMG-20250913-WA0011.jpg
Published on

ದಾವಣಗೆರೆ : ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯಿಂದ ದೊಡ್ಡಬಳ್ಳಾಪುರದ ಝಾನ್ಸಿಬಾಯಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ, ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲಾ ಮಹಿಳಾ ತಂಡ ಪ್ರಥಮ ಸ್ಥಾನ ಹಾಗೂ ಪುರುಷರ ತಂಡ ದ್ವಿತೀಯ ಸ್ಥಾನ ಪಡೆದವು.  ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ದಾವಣಗೆರೆ ತಂಡವು ತುಮಕೂರು ವಿರುದ್ಧ 35-28, 35-27 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿತು.  ಪುರುಷರ ವಿಭಾಗದ ಫೈನಲ್‌ನಲ್ಲಿ ದಾವಣಗೆರೆ ತಂಡವು ತುಮಕೂರು ವಿರುದ್ಧ 30-35, 35-32, 32-35 ಅಂತರದಿಂದ ಸೋಲು ಅನುಭವಿಸಿ ರನ್ನರ್‌ಅಪ್ ಆಯಿತು.  ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಟಿ. ಕುಮಾರ ಸ್ವಾಮಿ ನೇತೃತ್ವದಲ್ಲಿ ಹಿರಿಯ ಕ್ರೀಡಾಪಟುಗಳಾದ ಚಂದ್ರಶೇಖರ್, ಬಸವರಾಜಪ್ಪ ಭಾಗವಹಿಸಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net