ಸರ್ವತೋಮುಖ ಬೆಳವಣಿಗೆಗೆ ಚದುರಂಗ ಪೂರಕ

dvg-Chess.jpg
Published on

ದಾವಣಗೆರೆ : ಚದುರಂಗ (ಚೆಸ್) ಆಟವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಹೃದ್ರೋಗ ತಜ್ಞ ಡಾ. ಸುಬ್ಬಾ ರಾವ್ ಹೇಳಿದರು.  ವಿದ್ಯಾನಗರ ರೋಟರಿ ಕ್ಲಬ್ ಹಾಗೂ ನ್ಯೂ ದಾವಣಗೆರೆ ಡಿಸ್ಟ್ರಿಕ್ಟೃ್ ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ಇತ್ತೀಚೆಗೆ, 19 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಪರ್ಧಾತ್ಮಕ ಚೆಸ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಚೆಸ್ ಮಾನಸಿಕ ಸದೃಢತೆ, ಯೋಚನಾ ಶಕ್ತಿ ಹಾಗೂ ತಾಳ್ಮೆಯನ್ನು ಬೆಳೆಸಿಕೊಳ್ಳಲು ಅತ್ಯುತ್ತಮ ಆಟ ಎಂದು ತಿಳಿಸಿದರು.  ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಎ.ಎಂ. ಹೆಗಡೆ, ಲಯನ್ಸ್ ವಿದ್ಯಾನಗರ ಅಧ್ಯಕ್ಷ ಎಲ್.ಎಸ್. ಪ್ರಭುದೇವ್, ರೋಟರಿ ಉಪ ಗವರ್ನರ್ ಎಂ.ಎನ್. ಬಿಲ್ಲಳ್ಳಿ ಹಾಗೂ ಇನ್ನರ್‌ವೀಲ್ ಅಧ್ಯಕ್ಷೆ ಪ್ರೇಮ ಮಹೇಶ್ವರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಸತೀಶ್‌ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಪ್ಪ ಸ್ವಾಗತಿಸಿದರು, ಸುರೇಶ್ ಜೈನ್ ವಂದಿಸಿದರು. ವಿದ್ಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಒಟ್ಟಾರೆ 80 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧಿಗಳಿಗೆ ಪ್ರಶಸ್ತಿಪತ್ರ ಹಾಗೂ ವಿಜೇತರಿಗೆ ಪಾರಿತೋಷಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net