ಸರ್ ಎಂ.ವಿ. ಕಾಲೇಜು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

dvg-sir-m.v.-college.jpg
Published on

ದಾವಣಗೆರೆ :  ನಗರದ ಸರ್. ಎಂ.ವಿ. ಕಾಲೇಜಿನ ಹಲವು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆ್ಕೆುಯಾಗಿದ್ದಾರೆ.  ಪುರುಷರ ವಿಭಾಗದಲ್ಲಿ ಪುನೀತ್ (ಹ್ಯಾಂಡ್‌ಬಾಲ್), ಹರ್ಷವರ್ಧನ್, ಅಮೋಘ ಮತ್ತು ಆದಿತ್ಯ (ಬಾಸ್ಕೆಟ್‌ಬಾಲ್), ಚಿನ್ಮಯಿ (ಷಟಲ್‌ಬ್ಯಾಡ್ಮಿಂಟನ್), ಅಭಿಷೇಕ್, ಪ್ರಣವ್ ಮತ್ತು ಅಮೋಘ (ಟೇಬಲ್ ಟೆನಿಸ್), ಶ್ರೀರಾಮ್ (ಥ್ರೋಬಾಲ್), ಆದರ್ಶ, ಭುವನ್ ಮರೋಳ್, ರಿಷಭ್, ಟಿ.ಆರ್. ವಂಶಿ, ಸಿ.ಪಿ. ಕಾಂತೇಶ್ (ಈಜು), ಆದರ್ಶ, ಭರತ್ (ಚೆಸ್), ರೋಹಿತ್, ಗಗನ್ (ಅಥ್ಲೆಟಿಕ್ಸ್), ಸೌಗಂಧ್ (ಕರಾಟೆ), ಮಾರ್ತಾಂಡಪ್ಪ (ಯೋಗಾಸನ) ಹಾಗೂ ಪುನೀತ್ ಎಂ. ತಿಳುವಳ್ಳಿ (ಟೆನಿಕಾಯ್ಟ) ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ.  ಮಹಿಳೆಯರ ವಿಭಾಗದಲ್ಲಿ ಯಶಸ್ವಿನಿ ಮತ್ತು ಮನಸ್ವಿ (ಬಾಸ್ಕೆಟ್‌ಬಾಲ್), ಮೇಘನಾ (ಷಟಲ್ ಬ್ಯಾಡ್ಮಿಂಟನ್), ಪರಿಣಿಕ ಮತ್ತು ಧನ್ವಿ (ಚೆಸ್) ಹಾಗೂ ಸಿಂಚನ (ಅಥ್ಲೆಟಿಕ್ಸ್) ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ವಿದ್ಯಾರ್ಥಿಗಳ ಈ ಸಾಧನೆಯ ಬಗ್ಗೆ ಸಂಸ್ಥೆಯ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ನಿರ್ದೇಶಕ ಸೈಯದ್ ಷಂಷೀರ್ ಹಾಗೂ ಸಂಸ್ಥೆಯ ಎಲ್ಲ ನಿದೇಶಕರು, ಪ್ರಾಚಾರ್ಯ ದೇವರಾಜ್ ಎಂ. ಸರಾಪದ, ರಾಘವೇಂದ್ರ ರಾವ್, ದೈಹಿಕ ನಿರ್ದೇಶಕರಾದ ಕೆ.ಎನ್. ಕೊಟ್ರೇಶ್, ಜೆ.ನವೀನ್, ಬೋಧಕ, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.    ಚಿತ್ರ: ಡಿವಿಜಿ ಸರ್ ಎಂ.ವಿ. ಕಾಲೇಜ್  ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆ್ಕೆುಯಾಗಿರುವ ದಾವಣಗೆರೆಯ ಸರ್ ಎಂ.ವಿ. ಕಾಲೇಜು ವಿದ್ಯಾರ್ಥಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net