ವೇಟ್‌ಲಿಫ್ಟಿಂಗ್, ಪವರ್‌ಲಿಫ್ಟಿಂಗ್ ಸ್ಪರ್ಧೆಗೆ ಚಾಲನೆ

dvg-sports.jpg
Published on

ದಾವಣಗೆರೆ :  ಪ್ಯಾನ್ ಇಂಡಿಯಾ ಗೇಮ್ಸ್ ಫೆಡರೇಶನ್ ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಹಾಗೂ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ಗೆ ನಗರದ ಕೆಇಬಿ ಸಮುದಾಯ ಭವನದಲ್ಲಿ ಶನಿವಾರ, ಮಹಾನಗರ ಪಾಲಿಕೆ ಸದಸ್ಯ ಬಿ.ಜಿ. ಅಜಯ ಕುಮಾರ್ ಚಾಲನೆ ನೀಡಿದರು.  ಮೊದಲ ದಿನ 30, 35, 40, 45, 50, 55, 60, 65 ಹಾಗೂ 70 ವರ್ಷ ವಯೋಮಾನದವರಿಗೆ ನಡೆದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ತಮಿಳುನಾಡು, ಕೇರಳ, ಕರ್ನಾಟಕ, ದೆಹಲಿ ಇನ್ನಿತರ ರಾಜ್ಯಗಳ 15 ಮಹಿಳೆಯರು ಮತ್ತು 55 ಪುರುಷರು ಸೇರಿ ಒಟ್ಟು 70 ಸ್ಪರ್ಧಾಳುಗಳು ಭಾಗವಹಿಸಿದ್ದರು.  ಭಾನುವಾರ ನಡೆಯುವ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ 120ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗಹಿಸಲಿದ್ದಾರೆ ಎಂದು ಸಂಘಟಕ ಸಾಯಿನಾಥ್ ತಿಳಿಸಿದರು. ಕ್ರೀಡಾ ಸಂಘಟಕರಾದ ಬಸವರಾಜ್, ಷಣ್ಮುಖಾಚಾರ್, ಫಕೃದ್ದೀನ್, ರಾಜು, ಪ್ರೇಮ್‌ನಾಥ್, ವಿರೂಪಾಕ್ಷಪ್ಪ,  ಲಕ್ಷ್ಮೀಕಾಂತ್, ಹನುಮಂತಪ್ಪ, ಕರಿಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net