ರವೀಂದ್ರನಾಥ್‌ಗೆ ಬುದ್ಧಿ ಸ್ಥಿಮಿತ ಇದ್ದಂತಿಲ್ಲ

G.M.Siddeshwar-.jpg
Published on

ದಾವಣಗೆರೆ :  ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ತಾವೇನೂ ಅತ್ತಿಲ್ಲ, ಕರೆದಿಲ್ಲ. ಎಸ್.ಎ. ರವೀಂದ್ರನಾಥ್‌ಗೆ ವಯಸ್ಸಾಗಿದೆ, ಬುದ್ಧಿ ಸ್ಥಿಮಿತ ಇದ್ದಂತಿಲ್ಲ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.  ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಎಂದೂ ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು.  ನಾವೇನೂ ಹೀನಾಯವಾಗಿ ಸೋತಿಲ್ಲ. ನನ್ನ ಆರೋಗ್ಯ ಸರಿ ಇದ್ದಿದ್ದರೆ ನಾನೇ ಚುನಾವಣೆಗೆ ನಿಲ್ಲುತ್ತಿದ್ದೆ. ಎಲ್ಲ ಕಡೆ ಓಡಾಡುತ್ತಿದ್ದೆ, ನನ್ನ ಪತ್ನಿಯನ್ನು ಕಣಕ್ಕೆ ಇಳಿಸುತ್ತಿರಲಿಲ್ಲ. ಯಾರು ಏನೇನು ಮಾಡಿದ್ದಾರೆ ಎಂದು ಅತ್ಮಸಾಕ್ಷಿಯಿಂದ ಹೇಳಲಿ ಎಂದರು.  ಪ್ರಧಾನಿ ಮೋದಿ ವಿರುದ್ಧ ಮಾತನಾಡಿದ್ದು, ಕಾಂಗ್ರೆಸ್ ಸಚಿವರ ಮನೆಗೆ ಹೋಗಿ ಬಂದಿದ್ದು ರೇಣುಕಾಚಾರ್ಯ. ಇದರ ಬಗ್ಗೆ ರಾಷ್ಟ್ರ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡುತ್ತಾರೆ. ಅವರು ಮಾಡಿದ ತಪ್ಪಿಗೆ, ಕರ್ಮಕ್ಕೆ ಹೀನಾಯವಾಗಿ ಸೋತ್ತಿದ್ದಾರೆ ಎಂದು ರೇಣುಕಾಚಾರ್ಯ ಮತ್ತು ತಂಡದ ವಿರುದ್ಧ ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net