ಶಾಸಕ ಶಿವಗಂಗಾ ಜತೆ ನನಗೆ ಸಂಬಂಧವಿಲ್ಲ

G.M.Siddeshwar-_20250628005457532.jpg
Published on

ದಾವಣಗೆರೆ :  ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್‌ಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.  ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ವರ್ಷದಲ್ಲಿ ಒಂದು ಸಾರಿ ಚನ್ನಗಿರಿಯಲ್ಲಿ ಭೇಟಿಯಾಗಿದ್ದೆ. ಅದನ್ನು ಬಿಟ್ಟರೆ ನಮ್ಮ ಕುಟುಂಬದ ಮದುವೆಗೆ ಕರೆದಿದ್ದೆ ಎಂದು ತಿಳಿಸಿದರು.  ಬಿಜೆಪಿಯಿಂದ ನನ್ನನ್ನು ಉಚ್ಚಾಟಿಸಬೇಕೆಂಬ ನಿಟ್ಟಿನಲ್ಲಿ ಕೆಲವರು ಪ್ರಯತ್ನ ನಡೆಸಿದ್ದಾರೆ. ಅವರೇ ನನ್ನ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.  ಲೊಕಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯ ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎನ್ನುವ ವಿಷಯವಾಗಿ ಪ್ರಶ್ನಿಸಿದಾಗ, ರಾಜ್ಯಾಧ್ಯಕ್ಷರು ನಿಮ್ಮ ವರದಿ ನೋಡಿ ಏನು ಕ್ರಮ ಕೈಗೊಳ್ತಾರೆ ನೋಡೋಣ ಎಂದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net