ಸಿದ್ದು ಫೋಟೋ ಬಯಾಗ್ರಫಿ 3 ಕಿ.ಮೀ. ಉದ್ದ

Siddu
Published on

ದಾವಣಗೆರೆ: ಆ. 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಅಭಿಮಾನಿಗಳು 3 ಕಿ.ಮೀ. ಉದ್ದ, 6.5 ಮೀಟರ್ ಅಗಲದ ಫೋಟೋ ಬಯಾಗ್ರಫಿ ಸಿದ್ಧಪಡಿಸಿದ್ದಾರೆ.

ಸವದತ್ತಿಯ ಯುವ ಕಾಂಗ್ರೆಸ್ ಮುಖಂಡ ಸೌರಭ್ ಚೋಪ್ರಾ ಮಾರ್ಗದರ್ಶನದಲ್ಲಿ ಆನಂದ ಚೋಪ್ರಾ ಅಭಿಮಾನಿ ಬಳಗದವರು ಗುಜರಾತ್‌ನ ಸೂರತ್‌ನಲ್ಲಿ ಒಂದೇ ಬಟ್ಟೆಯಲ್ಲಿ ಇದನ್ನು ಮಾಡಿಸಿದ್ದು 10 ಲಕ್ಷ ರೂ. ವೆಚ್ಚ ತಗುಲಿದೆ.

ಇದರಲ್ಲಿ ಸಿದ್ದರಾಮಯ್ಯ ಅವರ ಜೀವನಕ್ಕೆ ಸಂಬಂಧಿಸಿದ 500 ಫೋಟೋಗಳನ್ನು ಬಳಸಲಾಗಿದೆ. ಅವರ ಬಾಲ್ಯ, ಕಾಲೇಜು ಜೀವನ, 40 ವರ್ಷಗಳ ರಾಜಕೀಯ ಬದುಕಿನಲ್ಲಿ ಜೆಡಿಎಸ್‌ನಲ್ಲಿದ್ದ ದಿನಗಳು, ಸಿಎಂ ಆಗಿದ್ದು, 13 ಬಜೆಟ್ ಮಂಡಿಸಿದ ಸಂದರ್ಭದ ಭಾವಚಿತ್ರಗಳಿವೆ.

ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಂದ ಇದನ್ನು ಉದ್ಘಾಟನೆ ಮಾಡಿಸುವುದು ಅಭಿಮಾನಿಗಳ ಉದ್ದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net