

ದಾವಣಗೆರೆ : ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ನಂ. 1 ಫ್ಯಾಷನ್ ಮಾಲ್ ಆಗಿರುವ ‘ದಿ ಚೆನ್ನಯ್ ಶಾಪಿಂಗ್ ಮಾಲ್’ನ ಕರ್ನಾಟಕದ ಮೊಟ್ಟ ಮೊದಲ ಶಾಖೆ ನಗರದ ಪಿ.ಬಿ. ರಸ್ತೆಯ ಅರುಣಾ ಚಿತ್ರಮಂದಿರದ ಹತ್ತಿರ ಶನಿವಾರ ಉದ್ಘಾಟನೆಯಾಯಿತು. ‘ದಿ ಚೆನ್ನಯ್ ಶಾಪಿಂಗ್ ಮಾಲ್’ ಉದ್ಘಾಟಿಸಿದ ಖ್ಯಾತ ಚಿತ್ರ ನಟಿ ರಚಿತಾ ರಾಮ್ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಈ ಸಂಸ್ಥೆಯ 26ನೇ ಶಾಪಿಂಗ್ ಮಾಲ್ ಆಗಿದ್ದು ಅದ್ಭುತವಾಗಿದೆ. ಇದೇ ರೀತಿ ಹಲವಾರು ಕಡೆ ಇದರ ಶಾಖೆಗಳನ್ನು ತೆರೆಯುವ ಯೋಜನೆ ಹೊಂದಿದ್ದಾರೆ. ಮಾ. 8 ರಂದು ರಾಯಚೂರಿನಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು. ದಾವಣಗೆರೆಯಲ್ಲಿ ಈ ಶಾಪಿಂಗ್ ಮಾಲ್ ಆರಂಭವಾಗುತ್ತಿರುವುದಕ್ಕೆ ಖುಷಿಯಿದೆ. ಇಲ್ಲಿ ಸೀರೆಗಳು ಸೇರಿದಂತೆ ಒಳ್ಳೆಯ ಸಂಗ್ರಹಗಳಿವೆ. ಬೆಲೆಗಳು ಕೇವಲ 99 ರೂ.ಗಳಿಂದ ಆರಂಭವಾಗುತ್ತಿದ್ದು ಎಲ್ಲರಿಗೂ ಕೈಗೆಟುಕುವಂತಿವೆ. ಯಾರು ಬೇಕಾದರೂ ಬಂದು ಶಾಪಿಂಗ್ ಮಾಡಬಹುದು. ಇಷ್ಟು ಕಡಿಮೆ ಬೆಲೆಗೆ ಸಿಗುವುದು ನನಗೆ ಅಚ್ಚರಿ ತಂದಿದೆ ಎಂದರು. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಶಾಪಿಂಗ್ ಮಾಲ್ ಅತ್ಯಾಧುನಿಕ ಮತ್ತು ಸುಸಜ್ಜಿತವಾಗಿದೆ. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿಯಂಥ ಮಹಾನಗರಗಳಲ್ಲಿ ಇರುವುದಕ್ಕಿಂತ ಉತ್ತಮವಾಗಿದೆ. ಗ್ರಾಹಕರು ಇಲ್ಲಿಗೆ ಭೇಟಿ ನೀಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಗಾಯತ್ರಿ ಸಿದ್ದೇಶ್ವರ, ಸಂಸ್ಥೆಯ ಮಾಲೀಕರಾದ ಮರ‌್ರಿ ಜನಾರ್ದನ ರೆಡ್ಡಿ, ಮರ‌್ರಿ ಜಮುನಾ ರೆಡ್ಡಿ, ಮರ‌್ರಿ ವೆಂಕಟರೆಡ್ಡಿ, ಮಧುಮಿತಾ ಇದ್ದರು.