ಬಿಎಸ್‌ಸಿ ಎಕ್ಸ್‌ಕ್ಲೂಸಿವ್‌ನಲ್ಲಿ  ಕೃಷ್ಣ ಜನ್ಮಾಷ್ಟಮಿ

channabasappa.jpg
Published on

ದಾವಣಗೆರೆ : ನಗರದ ಡೆಂಟಲ್ ಕಾಲೇಜು ರಸ್ತೆಯ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ನ ಬಿ.ಎಸ್.ಸಿ. ಎಕ್ಸ್‌ಕ್ಲೂಸಿವ್ ಶಾಖೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳಿಗೆ ಕೃಷ್ಣನ ವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
 ಸ್ಪರ್ಧೆಯಲ್ಲಿ ಸುಮಾರು 20 ಶಾಲೆಗಳಿಂದ 6 ವರ್ಷದೊಳಗಿನ ಸುಮಾರು 100 ಮಕ್ಕಳು ಭಾಗವಹಿಸಿದ್ದರು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಪಾರಿತೋಷಕ ನೀಡಲಾಯಿತು. ಅಲ್ಲದೇ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
 ಬಿ.ಎಸ್.ಚನ್ನಬಸಪ್ಪ ಆ್ಯಂಡ್ ಸನ್ಸ್ ಅಂಗಡಿ ಮಾಲೀಕ ಬಿ.ಸಿ.ಚಂದ್ರಶೇಖರ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಇದ್ದರು. ಪ್ರಸನ್ನ ಮತ್ತು ರೋಶಿನಿ ತೀರ್ಪುಗಾರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net