ಮಕ್ಕಳಿಗೆ ಕಲೆ, ಸಂಸ್ಕೃತಿ ಪರಿಚಯ ಅಗತ್ಯ

dvg-shivasimpi.jpg
Published on

ದಾವಣಗೆರೆ : ಸಮಾಜದ ಮುನ್ನಡೆಗಾಗಿ ಕಲೆ ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಅದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ ಆಗುತ್ತವೆ ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ದೂಡಾ) ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸಲಹೆ ನೀಡಿದರು.  ನಗರದ ಚಿಂದೋಡಿ ಲೀಲಾ ಸಭಾಂಗಣದಲ್ಲಿ ಶಿವಸಿಂಪಿ ಸಮಾಜದ ವತಿಯಿಂದ ಶನಿವಾರ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ, ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.  ದೂಡಾ ವತಿಯಿಂದ ಸಮುದಾಯಕ್ಕೆ ನಿವೇಶನ ಒದಗಿಸಲಾಗಿದೆ. ಈ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು. ಈ ಕುರಿತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.  ನಾಗರಿಕ ಸೌಲಭ್ಯ ನಿವೇಶನಕ್ಕೆ ನಿಗದಿಪಡಿಸಿದ ದರ ಪಾವತಿ ಕಷ್ಟವಾಗಿದ್ದು, ರಿಯಾಯಿತಿ ಕಲ್ಪಿಸಿದರೆ ಅನುಕೂಲ ಎಂದು ಸಮುದಾಯದ ಪ್ರಮುಖರು ಮನವಿ ಮಾಡಿದರು.  ಬನಹಟ್ಟಿಯ ಮಹಾಂತ ದೇವರು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಸಿಂಪಿ ಸಮಾಜದ ನೂತನ ಅಧ್ಯಕ್ಷ ಚಿಂದೋಡಿ ಎಲ್. ಚಂದ್ರಧರ್, ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ವರ, ಖಜಾಂಚಿ ಎಚ್.ಎನ್. ನಾಗರಾಜ್, ಬಾಪೂಜಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬಸವರಾಜ ಉತ್ತಂಗಿ, ನಗರಸಭೆಯ ಮಾಜಿ ಸದಸ್ಯೆ ಗೀತಾ ಮುರುಗೇಶ್, ನಟ ಸಂತೋಷ್, ಗುರುಬಸಪ್ಪ ಬೂಸ್ನೂರು, ಜಗದೀಶ್ ಬಾವಿಕಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net