ಸಿಡಿಲು ಬಡಿದು 25 ಮೇಕೆ ಸಾವು

dvg-eechaghatta-18.jpg
Published on

ದಾವಣಗೆರೆ : ತಾಲೂಕಿನ ಈಚಗಟ್ಟ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು 25 ಮೇಕೆಗಳು ಮೃತಪಟ್ಟು 3 ಮರಿಗಳಿಗೆ ಗಾಯಗಳಾಗಿವೆ.
 ಈ ಮೇಕೆಗಳು ಗ್ರಾಮದ ರೇವಣಿಬಾಯಿ-ಪಾಪ್ಯನಾಯ್ಕ ದಂಪತಿಗೆ ಸಂಬಂಧಿಸಿದವು. ಸಂಜೆ 4.30ರ ಸುಮಾರು ಗ್ರಾಮದ ಹೊರ ವಲಯದಲ್ಲಿ ಮೇಕೆಗಳನ್ನು ಮೇಯಿಸಲು ಹೋದಾಗ ಗಾಳಿ ಸಹಿತ ಮಳೆಯಾಗಿದೆ.
 ಮೇಕೆಗಳು ಮರವೊಂದರ ಕೆಳಗೆ ಆಶ್ರಯ ಪಡೆಯುತ್ತಿದ್ದಾಗ ಸಿಡಿಲು ಬಡಿದು 25 ಮೇಕೆಗಳು ಸ್ಥಳದಲ್ಲೇ ಮೃತಪಟ್ಟವು. 3 ಮೇಕೆ ಮರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ತಿಳಿಸಿದರು.
 ಘಟನಾ ಸ್ಥಳಕ್ಕೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ, ಮೇಕೆ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಗ್ರಾಮ ಆಡಳಿತಾಧಿಕಾರಿ ಗೊಲ್ಲರಹಳ್ಳಿ ಹನುಮಂತಪ್ಪ, ಪಶು ವೈದ್ಯರು ಭೇಟಿ ನೀಡಿ ಮುಂದಿನ ಕ್ರಮಗಳನ್ನು ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net