ದೂರಿನ ಬಗ್ಗೆ ಗೊತ್ತಿಲ್ಲ, ಕೇಳಿದರೆ ಉತ್ತರಿಸುವೆ

Dvg-Shamanuru-Shivashankrappa_20231003235128504.jpg
Published on

ದಾವಣಗೆರೆ : ಕಾಂಗ್ರೆಸ್ ಹೈಕಮಾಂಡ್‌ಗೆ ನನ್ನ ವಿರುದ್ಧ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ. ವರಿಷ್ಠರು ಏನಾದರೂ ಕೇಳಿದರೆ ಸೂಕ್ತ ಉತ್ತರ ಕೊಡುತ್ತೇನೆ ಎಂದು ಪಕ್ಷದ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
 ಲಿಂಗಾಯತ ಕಡೆಗಣನೆ ಕಲಹ ವರಿಷ್ಠರ ಅಂಗಳವನ್ನು ತಲುಪಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಅವರು ಮಂಗಳವಾರ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದರು.
 ನಾನಂತೂ ಸತ್ಯವನ್ನೇ ಹೇಳಿದ್ದೇನೆ, ಇದರಲ್ಲಿ ಎರಡು ಮಾತಿಲ್ಲ. ಈ ಕುರಿತು ವರಿಷ್ಠರಂತೂ ನನಗೆ ಮಾತಾಡಿಲ್ಲ. ಅವರೇನಾದರೂ ಕೇಳಿದರೆ ಇರುವ ವಿಚಾರವನ್ನು ಹೇಳುತ್ತೇನೆ ಅದರಲ್ಲೇನಿದೆ ಎಂದರು.
 ...
 
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net