ಆಹ್ವಾನ ಬಂದರೆ ಸಿಎಂ ಜತೆ ಚರ್ಚೆಗೆ ಸಿದ್ಧವೆಂದ ಶಾಮನೂರು

Dvg-Shamanuru-Shivashankrappa.jpg
Published on

ದಾವಣಗೆರೆ : ಲಿಂಗಾಯತ ಕಡೆಗಣನೆ ಕಲಹ 4ನೇ ದಿನವೂ ಮುಂದುವರಿದಿದ್ದು, ಆಹ್ವಾನ ಬಂದರೆ ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತನಾಡುವುದಾಗಿ ಕಾಂಗ್ರೆಸ್‌ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
 ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿದ್ದು ಸತ್ಯ. ನಮ್ಮ ಸಮುದಾಯದ ಒಬ್ಬ ಜಿಲ್ಲಾಧಿಕಾರಿಯೂ ಇಲ್ಲ. ಎಲ್ಲಿ ಯಾರಿಗೆ ತೊಂದರೆ ಆಗಿದೆ ಎಂಬುದನ್ನು ವಿವರಿಸುವುದಾಗಿ ತಿಳಿಸಿದರು.
 ವೀರಶೈವ ಲಿಂಗಾಯತ ಸಮಾಜಕ್ಕೆ 7 ಸಚಿವ ಸ್ಥಾನ ನೀಡಿದ್ದಾರೆ, ಅದರ ಬಗ್ಗೆ ಪ್ರಶ್ನೆ ಇಲ್ಲ. ಆದರೆ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಎಷ್ಟು ಜನರಿದ್ದಾರೆ?, ನಾನು ಸತ್ಯ ಹೇಳಿದ್ದೇನೆ, ಅದಕ್ಕಾಗಿಯೇ ಈ ವಿಚಾರ ರಾಜ್ಯದಾದ್ಯಂತ ಚರ್ಚೆಯಾಗುತ್ತಿದೆ ಎಂದು ಮತ್ತೊಮ್ಮೆ ಸಮರ್ಥಿಸಿಕೊಂಡರು.
 ತಮ್ಮ ಹೇಳಿಕೆಯ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, ನಾನು ಸತ್ಯ ಹೇಳಿದ್ದೇನೆ, ವಿಶ್ವನಾಥ್ ಅವರಂತೆ ಯಾರಿಗೋ ಬೆಣ್ಣೆ ಹಚ್ಚಿ ಎಂಎಲ್ಸಿ ಆಗಿಲ್ಲ. ಜನರಿಂದ 7 ಬಾರಿ ಆಯ್ಕೆಯಾಗಿ ಶಾಸಕನಾಗಿದ್ದೇನೆ ಎಂದು ಟಾಂಗ್ ಕೊಡುವ ಜತೆಗೆ ವಿಶ್ವನಾಥ್ ಅವರನ್ನು ಹುಚ್ಚಾಸ್ಪತ್ರೆಗೆ ಕಳಿಹಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net