

ದಾವಣಗೆರೆ : ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಮಾಹಿತಿ, ಶಿಕ್ಷಣ ಹಾಗೂ ಆಹಾರ ಹಕ್ಕು ಕಾಯ್ದೆಗಳಂತಹ ಹೆಗ್ಗುರುತುಗಳನ್ನು ದೇಶದ ಭವಿಷ್ಯದ ದೃಷ್ಟಿಯಿಂದ ಕೊಡುಗೆಯಾಗಿ ನೀಡಿದರು ಎಂದು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ. ಮನಮೋಹನ ಸಿಂಗ್ ಅವರು ಚಿಂತಕರು, ವಿದ್ವಾಂಸರು ಹಾಗೂ ನಿಗರ್ವಿಗಳಾಗಿದ್ದರು. ದೇಶದ ಪ್ರಧಾನಿಯಾಗಿ ಹಲವು ಸುಧಾರಣೆಗಳನ್ನು ಮಾಡಿದರು ಎಂದು ಹೇಳಿದ್ದಾರೆ.