

ದಾವಣಗೆರೆ : ಇಡೀ ವಿಶ್ವದಲ್ಲೇ ಅಸಮಾನತೆ ವಿರೋಧಿಸಿದ ಮೊದಲಿಗ ಬಸವಣ್ಣ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭಾದಿಂದ ನಗರದ ಎಂಬಿಎ ಕಾಲೇಜು ಆವರಣದ ಮಹಾಸಭಾ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿದ್ದ ಅಸಮಾನತೆ, ಅಂಧಶ್ರದ್ಧೆಗಳನ್ನು ತನ್ನ ಮನೆಯಿಂದಲೇ ಧಿಕ್ಕರಿಸಿದ ಅವರು ಸಮಾಜ ಬದಲಾವಣೆಯ ದಿಕ್ಕಿನೆಡೆಗೆ ಹೊರಟ ಅವರು ಮಹಿಳೆಗೂ ಸಮಾಜದಲ್ಲಿ ಗೌರವ ಸಿಗುವಂತೆ ಮಾಡಿದರು ಎಂದರು.
ರಾಜ್ಯ ಸರ್ಕಾರ ಬಸವಣ್ಣನವರನ್ನು ಅಧಿಕೃತವಾಗಿ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಆದರೆ, ಅವರು ಅಂದೇ ಸಾಂಸ್ಕೃತಿಕ ನಾಯಕರಾಗಿದ್ದರು ಎಂದರು.
ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಪರಿಕಲ್ಪನೆಯ ಅನುಭವ ಮಂಟಪ ಸ್ಥಾಪಿಸಿ ಎಲ್ಲ ಜಾತಿ ವರ್ಗದವರಿಗೂ ಮನ್ನಣೆ ನೀಡಿದ್ದರು ಎಂದು ತಿಳಿಸಿದರು.
ಮಹಾಸಭಾದ ಮತ್ತೊಬ್ಬ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ಮಹಾಸಭಾಕ್ಕೆ ದಾವಣಗೆರೆಯಲ್ಲಿ ನೀಡಿರುವ ನಿವೇಶನದಲ್ಲಿ ಶೀಘ್ರ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದರು.
ಐಗೂರು ಚಂದ್ರಶೇಖರ್, ಬಾಳೆಹೊಲದ ಕರಿಬಸಪ್ಪ, ಬಿ.ಜೆ.ರಮೇಶ್, ಪ್ರಕಾಶ್ ಪಾಟೀಲ್, ಗೀತಾ ಚಂದ್ರಶೇಖರ್, ರಾಜೇಶ್ವರಿ, ನಿರ್ಮಲಾ ಸುಭಾಷ್, ಶಶಿಕಲಾ ಮೂರ್ತಿ, ಕೊರಟಗೆರೆ ಶಿವಕುಮಾರ್, ಸುಷ್ಮಾ ಪಾಟೀಲ್, ದಾಕ್ಷಾಯಣಮ್ಮ, ಸುನೀತಾ ಭೀಮಣ್ಣ, ಬಾತಿ ಶಿವಕುಮಾರ್ ಇತರರು ಇದ್ದರು.
ಚಿತ್ರ : ಡಿವಿಜಿ ಮಹಾಸಭಾ
ವೀರಶೈವ-ಲಿಂಗಾಯತ ಮಹಾಸಭಾ ದಾವಣಗೆರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಬಿ.ಜೆ. ರಮೇಶ್, ಗೀತಾ ಚಂದ್ರಶೇಖರ್, ಸುಷ್ಮಾ ಪಾಟೀಲ್ ಇತರರು ಇದ್ದರು.