ರಾಹುಲ್ ಪ್ರಕರಣಕ್ಕೆ ಸುಪ್ರೀಂ ತಡೆ, ಶಾಮನೂರು ಸಂತಸ

Shamanur-Shivashakarppa-dvg-south.jpg
Published on

 ಶಾಮನೂರು ಶಿವಶಂಕರಪ್ಪ- ಮಲ್ಲಿಕಾರ್ಜುನ್ ಸಂತಸ
 ರಾಹುಲ್‌ಗಾಂಧಿ ಪ್ರಕರಣಕ್ಕೆ ಸುಪ್ರೀಂಕೋರ್ಟ್ ತಡೆ
 ದಾವಣಗೆರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತಡೆ ನೀಡಿರುವುದಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಂತಸ ವ್ಯಕ್ತಪಡಿಸಿದ್ದಾರೆ.
 ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ಸತ್ಯಕ್ಕೆ ನ್ಯಾಯ ಸಿಕ್ಕಂತಾಗಿದೆ. ರಾಹುಲ್‌ಗಾಂಧಿ ಅವರು ಸಂಸದರಾಗಿ ಮುಂದುವರಿಯಲಿದ್ದು, ಕೇಂದ್ರ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದೇಶದ ಜನತೆಯ ಗಮನಕ್ಕೆ ತರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಒಂದಲ್ಲಾ ಒಂದು ದಿನ ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ರಾಹುಲ್ ಗಾಂಧಿ ಅವರ ಹಾದಿ ಸ್ಪಷ್ಟವಾಗಿದೆ. ಸತ್ಯಕ್ಕೆ ನ್ಯಾಯಾಲಯ ಬೆಂಬಲ
 ನೀಡಿದೆ ಎಂದು ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸಿರುವ ಅವರು. ಇದು ಪ್ರಜಾಪ್ರಭುತ್ವದ ಗೆಲುವು, ಸತ್ಯಮೇವ ಜಯತೇ ಎಂದು
 ಬಣ್ಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net