

ದಾವಣಗೆರೆ : ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಸಿಇಎನ್ ಪೊಲೀಸ್ ಡಿವೈಎಸ್‌ಪಿ ಪದ್ಮಶ್ರೀ ಗುಂಜಿಕರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರೂ ದೇಶದ ಸ್ವಾತಂತ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರನ್ನು ಸ್ಮರಿಸಬೇಕು ಎಂದರು. ಶಾಲೆ ಮುಖ್ಯಸ್ಥ ಮಂಜುನಾಥ ರಂಗರಾಜು, ಪ್ರಾಚಾರ್ಯೆ ಜೆ.ಎಸ್. ವನಿತಾ ಮಾತನಾಡಿದರು. ಶೈಕ್ಷಣಿಕ ಮುಖ್ಯಸ್ಥ ಎಂ.ವಾಸಿಮ್ ಪಾಷಾ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶೀಭಾರಾಣಿ, ಪಿ.ವಿ. ಪ್ರಭು, ಆರ್.ಸವಿತಾ ಇದ್ದರು. ಮಕ್ಕಳ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.