ಸತ್ಕಾರ್ಯಗಳಿಗೆ ಪ್ರೇರೇಪಿಸುವವ ಸಮರ್ಥ ನಾಯಕ

DVG-KALARUKSHA-2.jpg
Published on

ದಾವಣಗೆರೆ : ಸಮಾಜಮುಖಿ ಸತ್ಕಾರ್ಯಗಳಿಗೆ ಪ್ರೇರೇಪಿಸುವವನೇ ಸಮರ್ಥ ನಾಯಕ ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ ಹೇಳಿದರು.  ನಗರದ ಬಾಪೂಜಿ ವಿದ್ಯಾಸಂಸ್ಥೆಯ ಸಿಬಿಎಸ್‌ಇ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ’ಕಲಾವೃಕ್ಷ’ ಉದ್ಘಾಟಿಸಿ, ಮಾತನಾಡಿದರು.  ಭವಿಷ್ಯದಲ್ಲಿ ಭಾರತಕ್ಕೆ ವಿಶ್ವ ನಾಯಕತ್ವ ವಹಿಸುವ ಅವಕಾಶ ಬರಲಿದ್ದು, ಅದಕ್ಕಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ನಾಯಕತ್ವ ಗುಣದ ಪರಿಕಲ್ಪನೆ ಬೆಳೆಸಬೇಕಿದೆ, ಉತ್ತಮ ನಾಯಕತ್ವ ಒಂದು ಕಲೆಯಾಗಿದ್ದು, ಕಾರ್ಯಕ್ರಮಕ್ಕೆ ’ಕಲಾವೃಕ್ಷ’ ಎಂಬ ಶೀರ್ಷಿಕೆ ಯೋಗ್ಯವಾಗಿದೆ ಎಂದು ತಿಳಿಸಿದರು.  ಒಂದು ಮರವು ಸುಮಾರು 50 ವರ್ಷದ ಅವಧಿಯಲ್ಲಿ ಆಮ್ಲಜನಕ ನೀಡುವುದು ಸೇರಿ 5 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಉಪಕಾರ ಮಾಡುತ್ತದೆ. ಸಸಿ ನೆಟ್ಟು ಬೆಳೆಸುವ ಹಾಗೂ ಸಂರಕ್ಷಿಸುವ ಕಾರ್ಯವನ್ನು ನಾಯಕತ್ವ ವಹಿಸಿದವರು ತಂಡದ ಸದಸ್ಯರಿಂದ ಮಾಡಿಸಬೇಕು ಎಂದು ಹೇಳಿದರು.  ಶಾಲೆಯ ಆಡಳಿತಾಧಿಕಾರಿ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರಾೃನಂತರ ನಮ್ಮ ದೇಶ 10 ಸಾವಿರ ಪಟ್ಟು ಆರ್ಥಿಕ  ಬಲಿಷ್ಠತೆ ಹೊಂದಿದೆ, ವಿದ್ಯಾರ್ಥಿಗಳು ಮುಂದೆ ಮತ್ತಷ್ಟು ದುಡಿದು ಆರ್ಥಿಕತೆ ಬೆಳೆಸಬೇಕು, ಸಂವಿಧಾನ ಅರ್ಥ ಮಾಡಿಕೊಂಡು ಅದರಂತೆ ನಡೆಯುವುದು ಮತ್ತು ನಡೆಸುವುದು ಸಹ ಉತ್ತಮ ನಾಯಕತ್ವದ ಲಕ್ಷಣ ಎಂದರು.  ಶಾಲಾ ಪ್ರಾಚಾರ್ಯ ಎಚ್.ಎಸ್. ಸತೀಶ್ ಇದ್ದರು. ಶಿಕ್ಷಕರಾದ ಮುರುಗೇಶ್, ಪ್ರಶಾಂತ್, ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಜೀವನ್ ಕೃಷ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಮೊಹಮ್ಮದ್ ಝಾಯಿದ್, ಗ್ರಂಥಾಲಯ ಕಾರ್ಯದರ್ಶಿ ಡಿ.ಪಿ. ಸಾನ್ವಿ, ಕ್ರೀಡಾ ಕಾರ್ಯದರ್ಶಿ ಮೊಹಮದ್ ಅನಸ್ ಖಾನ್, ಪ್ರವಾಸ ಕಾರ್ಯದರ್ಶಿ ಕೀರ್ತನಾ ಇದ್ದರು.  ಅರ್ಚನಾ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಜ್ವಲ್ ಪಟೇಲ್ ಸ್ವಾಗತಿಸಿದರು. ವರ್ಷಿಣಿ ಹಾಗೂ ಜೋಯಾ ಸುಲ್ತಾನ ನಿರೂಪಿಸಿದರು. ಹಿರಿಯ ಶಿಕ್ಷಕಿಯರಾದ ಆರ್. ಗೀತಾ ಪ್ರಾಸ್ತಾವಿಕ ಮಾತನಾಡಿದರು. ಕೆ.ಜಿ. ಪುಷ್ಪಾ ಪ್ರತಿಜ್ಞಾವಿಧಿ ಬೋಧಿಸಿದರು. ಶ್ವೇತಾ ಜಿ. ಶೇಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net