ಭದ್ರಾ ನಾಲೆಗಳ ಹೂಳೆತ್ತಲು ಖಾತ್ರಿ ಯೋಜನೆಯ ಬಲ

dvg-nreg-19-2.jpg
Published on

ಸುರೇಶ ಬಿ. ಇಟ್ನಾಳ್, ಜಿ.ಪಂ. ಸಿಇಒ

ನಾಲೆಗಳ ಹೂಳು ತೆಗೆಯುವಂತೆ ಅಚ್ಚುಕಟ್ಟು ಭಾಗದ ರೈತರು ಮನವಿ ಮಾಡಿದ್ದರು. ಅದರಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯಲಿದ್ದು ಪೋಲಾಗುವುದನ್ನು ತಡೆಯಬಹುದು. ಕೂಲಿ ಕಾರ್ಮಿಕರಿಗೆ ಉದ್ಯೋಗವೂ ಸಿಗುತ್ತದೆ.

(ಕೋಟ್)

...

* ಇಳುವರಿ ಹೆಚ್ಚಳಕ್ಕೆ ಸಹಕಾರಿ

* ಕೊನೇ ಭಾಗದ ರೈತರ ಜಮೀನುಗಳಿಗೆ ನೀರು ದೊರೆಯುವುದು

* ಕೃಷಿ, ನೀರಾವರಿ ವ್ಯವಸ್ಥೆ ಸುಧಾರಣೆ

* ಕಾಮಗಾರಿಯಿಂದ ಸ್ಥಳೀಯ ಕೂಲಿಕಾರರಿಗೆ ಕೆಲಸ

* ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಸಹಾಯ

ಪ್ರಯೋಜನಗಳು

...

ಚನ್ನಗಿರಿ ತಾಲೂಕಿನಲ್ಲಿ 77 ಕಿ.ಮೀ, ದಾವಣಗೆರೆ 206 ಕಿ.ಮೀ, ಹರಿಹರ 324 ಕಿ.ಮೀ, ಹೊನ್ನಾಳಿ 16 ಕಿ.ಮೀ, ನ್ಯಾಮತಿ ತಾಲೂಕಿನಲ್ಲಿ 12 ಕಿ.ಮೀ. ನಷ್ಟು ಕಾಮಗಾರಿ ಕೈಗೊಳ್ಳಲಾಗಿದೆ.

ಜಿಲ್ಲೆಯ 77 ಗ್ರಾ.ಪಂ. ವ್ಯಾಪ್ತಿಯಲ್ಲಿ 569 ಕಾಮಗಾರಿಗಳನ್ನು ಕೈಗೊಂಡು, 2.97 ಲಕ್ಷ ಕ್ಯೂಬಿಕ್ ಮೀಟರ್‌ನಷ್ಟು ಹೂಳೆತ್ತಲಾಗಿದೆ. ಇದಕ್ಕಾಗಿ 2.62 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ.

2.62 ಲಕ್ಷ ಮಾನವ ದಿನಗಳು

(ಬಾಕ್ಸ್)

...

ಇದನ್ನು ಮನಗಂಡು ಎನ್‌ಆರ್‌ಇಜಿ ಯೋಜನೆಯಡಿ 2023-24 ಮತ್ತು 2024-25ನೇ ಸಾಲಿನಲ್ಲಿ ಕಾಲುವೆ ಹೂಳು ತೆಗೆಯುವುದು ಮತ್ತು ದುರಸ್ತಿ ಕಾಮಗಾರಿಗಳನ್ನು ಜಿಲ್ಲೆಯ 77 ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಯಲ್ಲಿ ಅನುಮೋದನೆ ನೀಡಿ 569 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಕೊನೇ ಭಾಗದ ಜಮೀನುಗಳಿಗೆ ನೀರು ತಲುಪದಿರುವುದು, ಕಡಿಮೆ ನೀರಿನಿಂದ ಇಳುವರಿ ಕುಂಠಿತವಾಗುವುದು, ಕಾಲುವೆಗಳು ಶಿಥಿಲಗೊಂಡಿರುವುದು ಮತ್ತು ಹೂಳು ತುಂಬಿದ ಕಾರಣ ನೀರು ಪೋಲಾಗುವುದು ಸಾಮಾನ್ಯವಾಗಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶವು ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಹರಿಹರ ಮತ್ತು ಹೊನ್ನಾಳಿ ತಾಲೂಕುಗಳ ವ್ಯಾಪ್ತಿಯಲ್ಲಿ 1,22,649 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ತುಂಗಾ ಅಚ್ಚುಕಟ್ಟು ಪ್ರದೇಶದಲ್ಲಿ ಹೊನ್ನಾಳಿ, ನ್ಯಾಮತಿ ತಾಲೂಕುಗಳನ್ನು ಒಳಗೊಂಡು 17,291 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ.

ನಿರಂತರ ಮಳೆಯಿಂದಾಗಿ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದೆ. ಅಚ್ಚುಕಟ್ಟಿನ ಬೆಳೆಗಾರರು ನಾಲೆಗೆ ನೀರು ಬಿಡುವ ದಿನಕ್ಕಾಗಿ ಕಾಯುತ್ತಿದ್ದಾರೆ. ಈ ಹಂತದಲ್ಲಿ ಕಾಲುವೆಗಳು ಸುಸ್ಥಿತಿಯಲ್ಲಿ ಇರಬೇಕಾದುದು ಬಹಳ ಮುಖ್ಯ. ಎನ್‌ಆರ್‌ಇಜಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ರೈತಸ್ನೇಹಿಯಾಗಿವೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ 635 ಕಿ.ಮೀ.ನಷ್ಟು ಕಾಲುವೆಗಳ ಹೂಳೆತ್ತಲಾಗಿದ್ದು ನೀರಿನ ಸದ್ಬಳಕೆ ನಿಟ್ಟಿನಲ್ಲಿ ಇದೊಂದು ಗಮನಾರ್ಹ ಸಾಧನೆಯಾಗಿದೆ.

ರಮೇಶ ಜಹಗೀರದಾರ್ ದಾವಣಗೆರೆ

ಹೂಳೆತ್ತಲು ಎನ್‌ಆರ್‌ಇಜಿ ಕಾಮಗಾರಿ  635 ಕಿ.ಮೀ. ಕಾಲುವೆಗೆ ಬಲ

ಅಚ್ಚುಕಟ್ಟಿನ ನಾಲೆಗಳ ಬದಲಾದ ಸ್ವರೂಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net