ಸಹಕಾರ ಭಾರತಿ ಸಂಸ್ಥೆಯಿಂದ ಕಾರ್ಯಾಗಾರ

dvg-sahakara-bharathi-01.jpg
Published on

ದಾವಣಗೆರೆ: ಸಹಕಾರ ಭಾರತಿ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ಕಾರ್ಯಾಗಾರ ನಗರದ ಡಾ. ಶಾಮಸುಂದರ್ ಶೆಟ್ಟಿ ಬಂಟರ ಭವನದಲ್ಲಿ ಗುರುವಾರ ನಡೆಯಿತು.
 ಜಿಲ್ಲಾಧ್ಯಕ್ಷ, ಅಪೆಕ್ಸೃ್ ಬ್ಯಾಂಕ್ ನಿರ್ದೇಶಕ ಹಾಗೂ ಡಿಸಿಸಿ ಬ್ಯಾಂಕಿನ ನಿರ್ದೇಶಕ ಜಿ.ಎನ್. ಸ್ವಾಮಿ, ರಾಷ್ಟ್ರೀಯ ಸಂರಕ್ಷ ರಮೇಶ್ ವೈದ್ಯ ಜಿ, ರಾಜ್ಯ ಸೌಹಾರ್ದ ಸಯುಕ್ತ ಸಹಕಾರಿ ಅಧ್ಯಕ್ಷ ನಂಜನಗೌಡ್ರು, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಹಾಗೂ ಜಿಎಂ ಸೌಹಾರ್ದ ಅಧ್ಯಕ್ಷ ಪ್ರಭುದೇವ್ ಎಂ.ಆರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಣ್ಣೇಶ್ ಎಂ.ಬಿ. ಸಭೆಯಲ್ಲಿದ್ದರು.
 ಸಹಕಾರ ಭಾರತಿಯ ಕಾರ್ಯನಿರ್ವಹಣೆ, ಉತ್ತಮ ಆಯ್ಕೆ ಮಾಡಿದರೆ ಮಾತ್ರ ಸಂಸ್ಥೆಯ ಪ್ರಗತಿ ಸಾಧ್ಯ ಎನ್ನುವುದರ ಕುರಿತು ರಾಷ್ಟ್ರೀಯ ಅಧ್ಯಕ್ಷ ಬಿ.ಎಚ್. ಕೃಷ್ಣಾರೆಡ್ಡಿ ಮಾತನಾಡಿ, ಆಡಿಟ್ ಬಗ್ಗೆ ಮಾಹಿತಿ ನೀಡಿದರು.
 ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ ಸತೀಶ್ ಚಂದ್ರ ಅವರು ಒಟ್ಟಿಗೆ ಬಾಳೋಣ ಒಟ್ಟಿಗೆ ದುಡಿಯೋಣ ಹಾಗೂ ಒಟ್ಟಿಗೆ ಇರೋಣ ಎಂಬ ತತ್ವದಿಂದ ಆಯ್ಕೆಯಾದ ಮಂಡಳಿಯಿಂದ ಮಾತ್ರ ಉತ್ತಮವಾದ ಸಂಸ್ಥೆ ಮುಂದೆ ಸಾಗುತ್ತದೆ ಎಂದು ತಿಳಿಸಿ, ಅಧ್ಯಕ್ಷರ ಮತ್ತು ನಿರ್ದೇಶಕರ ಕರ್ತವ್ಯದ ಬಗ್ಗೆ ಮಾತನಾಡಿದರು.
 ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ತುಮ್ಕೋಸ್ ನಿರ್ದೇಶಕ ಸಂತೋಷ್ ಕೆ.ಜಿ, ಜಿಲ್ಲಾ ಕೋಶಾಧ್ಯಕ್ಷ ಮತ್ತು ಚಾರ್ಟರ್ಡ್ ಅಕೌಂಟಂಟ್ ಉಮೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀ ರಕ್ಷಾ ಚಿಟ್ಸ್ ಅಧ್ಯಕ್ಷ ರವಿ ಪಿ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net