ಫೆ. 27 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

IMG-20240130-WA0062.jpg
Published on

ದಾವಣಗೆರೆ : ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 27 ರಂದು ಹೆಬ್ಬಾಳ್ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
 ತಾಲೂಕಿನ ಹೆಬ್ಬಾಳು ಗ್ರಾಮದ ಶ್ರೀ ರುದ್ರೇಶ್ವರ ಸ್ವಾಮಿ ವಿರಕ್ತ ಮಠದಲ್ಲಿ ಸೋಮವಾರ ಸಂಜೆ ನಡೆದ ಮೊದಲ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
 ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಜಿಲ್ಲಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಹೆಬ್ಬಾಳು ಶ್ರೀಗಳಿಗೆ ಸಮ್ಮೇಳನ ಆಯೋಜಿಸುವ ಮಾತು ಕೊಟ್ಟಿದ್ದೆ. ಅದರಂತೆ ಈ ವರ್ಷ ಅನುವು ಮಾಡಿಕೊಡುವಂತೆ ಪ್ರಸ್ತಾಪಿಸಿದರು. ಇದಕ್ಕೆ ಸ್ವಾಮೀಜಿ ಸಮ್ಮಿತಿಸಿದರು.
 ತಾಲೂಕು ಘಟಕದ ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಪೂಜ್ಯರ ಆಶೀರ್ವಾದ ಹಾಗೂ ಗ್ರಾಮಸ್ಥರ ಸಹಕಾರ ಬೇಕೆಂದು ಮನವಿ ಮಾಡಿದರು.
 ಚರ್ಚೆಯ ನಂತರ ಮಠದ ಆಶ್ರಯದಲ್ಲಿರುವ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಯಿತು. ಇದನ್ನು ಸಭೆಯಲ್ಲಿದ್ದ ಗ್ರಾಮದ ಪ್ರಮುಖರು, ಜಿಲ್ಲಾ ಹಾಗೂ ತಾಲೂಕು ಕಸಾಪ ಪದಾಧಿಕಾರಿಗಳು ಸ್ವಾಗತಿಸಿದರು.
 ಶ್ರೀ ಮಹಂತ ರುದ್ರೇಶ್ವರ ಸ್ವಾಮೀಜಿ, ಸಮ್ಮೇಳನದ ಯಶಸ್ಸಿಗೆ ಎಲ್ಲ ರೀತಿಯ ಸಹಕಾರ, ಸಹಾಯ ಮಾಡುವುದಾಗಿ ಭರವಸೆ ನೀಡಿ ಆಶೀರ್ವದಿಸಿದರು.
 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಸಿ.ಜಿ. ಜಗದೀಶ್ ಕೂಲಂಬಿ, ಸಮ್ಮೇಳನದ ಮಹತ್ವ ಹಾಗೂ ಒಂದು ದಿನದ ಸಮ್ಮೇಳನದ ರೂಪುರೇಶೆಯ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
 ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ದಾಗಿನಕಟ್ಟೆ ಪರಮೇಶಪ್ಪ, ಪಾಲಾಕ್ಷಪ್ಪ ಗೋಪಾನಾಳು, ನಿರ್ದೇಶಕರಾದ ಎಂ. ಷಡಕ್ಷರಪ್ಪ ಬೇತೂರು, ಸೌಭಾಗ್ಯಮ್ಮ, ಪಂಕಜಾ ಬಕ್ಕೇಶ್, ಶಿವಕುಮಾರ್ ಇದ್ದರು.
 ಹೆಬ್ಬಾಳು ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾರುದ್ರಯ್ಯ, ಬಸಮ್ಮ ಬಸವರಾಜಪ್ಪ, ಮಹಾಂತೇಶ್, ರೈತರಾದ ನರೇಂದ್ರ ಬಾಬು, ರುದ್ರೇಶ್, ಮಹೇಂದ್ರ, ಟಿ.ಸಿ. ರುದ್ರೇಶ್, ಶಿವಕುಮಾರ್, ಶಿಕ್ಷಕರಾದ ತಿಪ್ಪೇಸ್ವಾಮಿ, ಎಚ್.ಆರ್. ಮಂಜುನಾಥ್, ಪಿಡಿಒ ಹಿಮಂತ್ ರಾಜ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net