ಬಾಬಾ ಪಾದುಕೆ ದರ್ಶನಕ್ಕೆ ವ್ಯವಸ್ಥೆ

dvg-sai-baba_20250413005718852.jpg
Published on

ದಾವಣಗೆರೆ  : ನಗರದ ಎಂ.ಸಿ.ಸಿ.‘ಎ’ ಬ್ಲಾಕ್‌ನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಅವರು ತಮ್ಮ ಜೀವಿತಾವಧಿಯಲ್ಲಿ ಧರಿಸುತ್ತಿದ್ದ ಪಾದುಕೆಗಳ ದರ್ಶನಕ್ಕೆ ಏ. 14 ಮತ್ತು 15ರಂದು ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಸಾಯಿ ಟ್ರಸ್ಟ್‌ನ ಟ್ರಸ್ಟಿ ಪರಶುರಾಮ್ ಹೇಳಿದರು.  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಯಿಬಾಬಾ ಮಂದಿರಕ್ಕೆ ಭಾನುವಾರ ಸಂಜೆ 5.30ಕ್ಕೆ ಸುವರ್ಣ ರಥದಲ್ಲಿ ಸಾಯಿಬಾಬಾ ಅವರ ಮೂರ್ತಿ ಹಾಗೂ ಪಾದುಕೆಗಳು ನಗರದ ಜಯದೇವ ವೃತ್ತಕ್ಕೆ ಆಗಮಿಸಲಿವೆ. ಅಲ್ಲಿಂದ ಸಾಯಿಬಾಬಾ ಮಂದಿರದ ವರೆಗೂ ಬೃಹತ್ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.  ಏ. 14 ಹಾಗೂ 15ರಂದು ಬೆಳಗ್ಗೆ 8ರಿಂದ ರಾತ್ರಿ 10 ಗಂಟೆಯ ವರೆಗೂ ಪಾದುಕೆಗಳನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಹಾಗೂ ಸಂಜೆ 6.30ಕ್ಕೆ ಆರತಿ ನೆರವೇರಲಿದೆ. ವಿಶೇಷ ಹೂವಿನ ಅಲಂಕಾರ ಮಾಡಲಾಗುವುದು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಲಡ್ಡು ಪಾಕೆಟ್‌ಗಳ ವ್ಯವಸ್ಥೆಯೂ ಇದೆ. 350 ಸೇವಾಕರ್ತರು ಕೆಲಸ ಮಾಡಲಿದ್ದಾರೆ. ಶಿರಡಿಯಿಂದ 4 ಮಂದಿ ಅರ್ಚಕರು ಬರಲಿದ್ದಾರೆ ಎಂದು ಮಾಹಿತಿ ನೀಡಿದರು.  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.  ಸಮಿತಿಯ ಕಾರ್ಯದರ್ಶಿ ಎಂ. ಶಿವಪ್ಪ, ಡಾ.ಎಚ್.ಎಸ್. ಜಾಧವ್, ಗಿರೀಶ್, ವಾಸುದೇವ ರಾಯ್ಕರ್, ಬಸವರಾಜ ಗೌಡ್ರು, ಮಧುಸೂದನ್, ರಾಜಶೇಖರ್, ಪ್ರಭಾಕರ್, ವೀರಣ್ಣ, ಸಾಯಿದೀಪ್, ನಿಖಿಲ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net