ಪೋಲಿಯೋ ಮುಕ್ತ ಜಗತ್ತು ರೋಟರಿ ಗುರಿ

dvg-rotary.jpg
Published on

ದಾವಣಗೆರೆ : ಜಗತ್ತನ್ನು ಪೋಲಿಯೋ ಮುಕ್ತ ಗೊಳಿಸುವುದು ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ ಎಂದು ವಿದ್ಯಾನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಹೇಳಿದರು.  ನಗರದಲ್ಲಿ ಗುರುವಾರ ಎಲ್ಲ ರೋಟರಿ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಪೋಲಿಯೋ ಜಾಗೃತಿ ಜಾಥಾ ನೇತೃತ್ವ ವಹಿಸಿ ಮಾತನಾಡಿದರು.  ಕಳೆದ 40 ವರ್ಷಗಳಿಂದ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಮಾಡಿದ ಪ್ರಯತ್ನಗಳು ಶೇ. 99.99 ರಷ್ಟು ಫಲಿತಾಂಶ ಕೊಟ್ಟಿದ್ದು ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಪೋಲಿಯೋ ಪ್ರಕರಣಗಳು ಇರುವುದು ಸಂಸ್ಥೆಯ ಪ್ರಯತ್ನಕ್ಕೆ ದೊರೆತ ಜಯವಾಗಿದೆ ಎಂದು ತಿಳಿಸಿದರು.  ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಿಂದ ಹೊರಟ ಜಾಥಾ ವಿದ್ಯಾನಗರದ ಮುಖ್ಯ ರಸ್ತೆ, ತರಳಬಾಳು ಬಡಾವಣೆ, ನೂತನ್ ಕಾಲೇಜು ರಸ್ತೆ, ಆಂಜನೇಯ ಬಡಾವಣೆ ಹಾಗೂ ವಿನಾಯಕ ಬಡಾವಣೆ ಮುಖಾಂತರ ಸಾಗಿ ಮಾಗನೂರು ಬಸಪ್ಪ ರೋಟರಿ ಭವನದಲ್ಲಿ ಮುಕ್ತಾಯಗೊಂಡಿತು.  ಮಾಗನೂರು ಬಸಪ್ಪ ಶಾಲೆಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ದಾವಣಗೆರೆ ರೋಟರಿ ಕ್ಲಬ್ ಅಧ್ಯಕ್ಷೆ ಸುನೀತಾ ಮೃತ್ಯುಂಜಯ, ದೇವನಗರಿ ವಲಯ ಉಪ ಗವರ್ನರ್ ಎಂ.ಎನ್. ಬಿಲ್ಲಳ್ಳಿ, ರೋಟರಿ ಕ್ಲಬ್ ದಾವಣಗೆರೆ, ರೋಟರಿ ಕ್ಲಬ್ ದಾವಣಗೆರೆ ಸೌತ್ ಹಾಗೂ ರೋಟರಿ ಕ್ಲಬ್ ಮಿಡ್ ಟೌನ್‌ನ ಮೃತ್ಯುಂಜಯಪ್ಪ, ಜಿ.ಬಿ. ಸಿದ್ದಪ್ಪ, ಎಚ್.ಎಂ. ಚಂದ್ರಾಚಾರ್, ಆಂಜನೇಯ ಮೂರ್ತಿ, ಎಚ್.ಕೆ. ಕಲ್ಲಪ್ಪ, ಎಂ.ಬಿ. ಚಂದ್ರಪ್ಪ, ಕುಸುಮಾ ವಿಜಯಾನಂದ, ಮಲ್ಲರಸ್, ನಾಗರಾಜ್ ಜಾಧವ್, ಪವನ್ ಪಡಗಲ್, ವೆರ್ನೆಕರ್, ಶೇಖರ್, ಚಿಗಟೇರಿ ಮುರುಘರಾಜೇಂದ್ರ, ಪುಟ್ಟೇಶಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net