ರಸ್ತೆ ಸುರಕ್ಷತೆ ಜಾಗೃತಿ ಮಾಸಾಚರಣೆ ಸಮಾರೋಪ

dvg-rto.jpg
Published on

ದಾವಣಗೆರೆ : ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ, ಹರಿಹರ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ಪ್ರೇರಣಾ ಸಮಿತಿ ಹರಿಹರ, ಪೊಲೀಸ್ ಇಲಾಖೆ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಸಮಾರೋಪ ಸಮಾರಂಭವನ್ನು ಹರಿಹರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.  ಹಿರಿಯ ಸಿವಿಲ್ ನ್ಯಾಯಾಧೀಶೆ ಪದ್ಮಶ್ರೀ ಮುನ್ನೊಳಿ, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಪ್ರಕಾಶ್, ಪಿಎಸ್‌ಐ ಶ್ರೀಪತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಎಸ್.ಟಿ. ಸತೀಶ್, ನಿವೃತ್ತ ಪ್ರಾಚಾರ್ಯ ಎಚ್.ವಿ. ಶ್ರೀನಿವಾಸ್ ಪಾಲ್ಗೊಂಡು ಮಕ್ಕಳಿಗೆ ಸಂಚಾರ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿದರು.  ಆರ್‌ಟಿಒ ಕಚೇರಿಯ ರಮೇಶ್ ಕುಮಾರ್ ನಿರೂಪಣೆ ಮಾಡಿದರು. ಉಪನ್ಯಾಸಕ ಜಕಣಾಚಾರಿ ಸ್ವಾಗತಿಸಿದರು. ಆರ್‌ಟಿಒ ಕಚೇರಿಯ ಅಧೀಕ್ಷಕರಾದ ಶಶಿಧರ್, ರವಿ ಇದ್ದರು. ರೂಪಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net