ಒಳ್ಳೆಯ ರಸ್ತೆ ಒಡೆದು, ಹೊಸದಾಗಿ ನಿರ್ಮಿಸಲು ವಿರೋಧ

dvg-road.jpg
Published on

ದಾವಣಗೆರೆ :  ನಗರದ ಶಿವಪ್ಪಯ್ಯ ವೃತ್ತದಿಂದ, ಡಾಂಗೆ ಪಾರ್ಕ್ ಮೂಲಕ ನಿಟ್ಟುವಳ್ಳಿಗೆ ಹೋಗುವ ಮುಖ್ಯ ರಸ್ತೆಯ ಅಗಲೀಕರಣದ ನೆಪದಲ್ಲಿ, ಒಳ್ಳೆಯ ರಸ್ತೆಯನ್ನು ಒಡೆದು, ಹೊಸ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಆ ಪಕ್ಷದ ಮುಖಂಡರು ವಿರೋಧಿಸಿದ್ದಾರೆ.  ಹಾಲಿ ಇರುವ ರಸ್ತೆಯನ್ನು ಒಡೆದು ಹೊಸ ರಸ್ತೆ ನಿರ್ಮಾಣ ಮಾಡಲು ಸಾರ್ವಜನಿಕರ ವಿರೋಧವೂ ಇದೆ. ಈ ವಿಷಯವನ್ನು ತಿಳಿದ, ವಿಪಕ್ಷ ನಾಯಕ ಪ್ರಸನ್ನ ಕುಮಾರ್ ನೇತೃತ್ವದ, ಪಾಲಿಕೆಯ ಬಿಜೆಪಿ ಸದಸ್ಯರ ತಂಡವು ರಸ್ತೆ ಕಾಮಗಾರಿ ನೆಡೆಯುವ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿದರು.  ಈಗಿರುವ ರಸ್ತೆ ಉತ್ತಮವಾಗಿದ್ದು, ನಗರದಲ್ಲಿ ಅನೇಕ ರಸ್ತೆ ಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಲೂ ಸಾಧ್ಯವಾಗದ ಪಾಲಿಕೆ, ಸಾರ್ವಜನಿಕರ ತೆರಿಗೆ ಹಣವನ್ನೂ ಪೋಲು ಮಾಡುತ್ತಿದೆ. ನಗರದಲ್ಲಿ ಇನ್ನೂ ಅನೇಕ ರಸ್ತೆಗಳು ಸಾರ್ವಜನಿಕರು ಓಡಾಡಲು ಸಾಹಸ ಪಡುವ ರೀತಿ ಇವೆ. ಆ ರಸ್ತೆಗಳನ್ನು  ಅಭಿವೃದ್ಧಿಪಡಿಸಲಿ. ಈಗಿರುವ ರಸ್ತೆಯನ್ನು ಒಡೆದು ಹೊಸದಾಗಿ ನಿರ್ಮಿಸುವ ಬದಲು ಇದೇ ರಸ್ತೆಯನ್ನು ಅಗಲೀಕರಣ ಮಾಡಿ, ಫುಟ್ಪಾತ್, ಚರಂಡಿ ನಿರ್ಮಾಣ ಮಾಡಲಿ ಎಂದು, ಆಯುಕ್ತರಿಗೆ ಆಗ್ರಹಿಸಿ ಮನವಿ ಮಾಡಲಾಯಿತು.  ಪಾಲಿಕೆ ಸದಸ್ಯರಾದ ಆರ್. ಶಿವಾನಂದ್, ಕೆ.ಎಂ. ವೀರೇಶ್, ಎಸ್.ಟಿ. ವೀರೇಶ್, ಬಿಜೆಪಿ ಮುಖಂಡರಾದ ಜಯಪ್ರಕಾಶ್, ಸುರೇಶ್, ಯೋಗೀಶ್, ಲಕ್ಷ್ಮಣ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net