

ದಾವಣಗೆರೆ: ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ 10ನೇ ತರಗತಿ ಸಿ.ಬಿ.ಎಸ್.ಇ. ಪರೀಕ್ಷೆಯಲ್ಲಿ ನಗರದ ಸಿದ್ಧಗಂಗಾ ಶಾಲೆಗೆ ಶೇ. 100 ಫಲಿತಾಂಶ ಬಂದಿದೆ.
ಮೋತಿ ವೀರಪ್ಪ ಕಾಲೇಜಿನ ಪ್ರೊ. ಡಿ. ರವಿಕುಮಾರ್ ಮತ್ತು ಬಾಡಾ ಕ್ಲಸ್ಟರ್ ಸಿ.ಆರ್.ಪಿ. ವಿ.ಸಿ. ಉಷಾ ಅವರ ಪುತ್ರ ಆರ್. ಧ್ರುವಕುಮಾರ್ ರೆಡ್ಡಿ 500ಕ್ಕೆ 474 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಕನ್ನಡ 99, ಇಂಗ್ಲಿಷ್ 86, ಗಣಿತ 96, ವಿಜ್ಞಾನ 95, ಸಮಾಜ 98 ಅಂಕಗಳನ್ನು ಪಡೆದು ಶೇ. 94.80 ಅಂಕಗಳನ್ನು ಗಳಿಸಿದ್ದಾನೆ. ಎಚ್.ಎಂ. ತೇಜಸ್ವಿನಿ ದ್ವಿತೀಯ (460), ಎನ್. ಲಕ್ಷ್ಮೀ (458) ತೃತೀಯ ಸ್ಥಾನ, ಸಿ.ಆರ್. ಸಿರಿ (455), ಕೆ.ಎ. ತೇಜಸ್ (451), ವಿ. ಸಿಂಚನ (450) ಶೇ. 90ಕ್ಕಿಂತ ಅಧಿಕ ಅಂಕ ಪಡೆದವರಾಗಿದ್ದಾರೆ. 20 ಮಕ್ಕಳು ಅತ್ಯುನ್ನತ, 55 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮಕ್ಕಳ ಈ ಸಾಧನೆಯ ಬಗ್ಗೆ ಸಿದ್ಧಗಂಗಾ ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಕಾರ್ಯದರ್ಶಿ ಡಿ.ಎಸ್. ಹೇಮಂತ್ ಮತ್ತು ನಿರ್ದೇಶಕ ಡಾ. ಡಿ.ಎಸ್. ಜಯಂತ್ ಹರ್ಷ ವ್ಯಕ್ತಪಡಿಸಿದ್ದಾರೆ.