ಭದ್ರಾ ಪದವಿಪೂರ್ವ ಕಾಲೇಜಿಗೆ ಶೇ 95 ಫಲಿತಾಂಶ

dvg-ADITHYA-V-bhadra-p-u-college.jpg
Published on

ದಾವಣಗೆರೆ: ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಭದ್ರಾ ಪದವಿಪೂರ್ವ ಕಾಲೇಜು ಶೇ. 95 ಫಲಿತಾಂಶ ಪಡೆದಿದೆ.
 ವಿಜ್ಞಾನ ವಿಭಾಗದಲ್ಲಿ ವಿ. ಆದಿತ್ಯ 588 (ಶೇ. 98) ಅಂಕಗಳನ್ನು ಪಡೆದು ಜಿಲ್ಲೆಗೆ 4ನೇ, ರಾಜ್ಯಕ್ಕೆ 11ನೇ ಸ್ಥಾನ ಪಡೆದಿದ್ದಾನೆ. ರಮ್ಯಾ ಸಿ. ಕಮದೋಡ್ 583, ಐಶ್ವರ್ಯಾ ತೆಗ್ಗಿಹಳ್ಳಿ 578 ಅಂಕ ಗಳಿಸಿದ್ದಾರೆ.
 ವಾಣಿಜ್ಯ ವಿಭಾಗದಲ್ಲಿ ಎಚ್.ಸಿ. ಗಗನಾ 559, ಎಲ್.ಎಚ್. ತರುಣ್ ಕುಮಾರ್ 558, ಸಾನಿಯಾ ಕೌಸರ್ 558 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 30, ವಾಣಿಜ್ಯ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
 ವಿಜ್ಞಾನ ವಿಭಾಗದಲ್ಲಿ 55, ವಾಣಿಜ್ಯ ವಿಭಾಗದಲ್ಲಿ 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ, ಗಣಿತ, ಜೀವಶಾಸ್ತ್ರ ವಿಷಯಗಳಲ್ಲಿ ತಲಾ ಇಬ್ಬರು, ರಾಸಾಯನಶಾಸ್ತ್ರ, ಗಣಕಶಾಸ್ತ್ರ ವಿಷಯಗಳಲ್ಲಿ ತಲಾ ಒಬ್ಬರು 100 ಕ್ಕೆ 100 ಅಂಕ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net