

ದಾವಣಗೆರೆ : ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ನಗರದ ಸಿದ್ಧಗಂಗಾ ಪದವಿಪೂರ್ವ ಕಾಲೇಜಿಗೆ ಶೇ. 98.83 ಫಲಿತಾಂಶ ದೊರಕಿದೆ.
ಪರೀಕ್ಷೆಗೆ ಹಾಜರಾದ 939 ಮಕ್ಕಳಲ್ಲಿ 612 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಷಯವಾರು ನೂರಕ್ಕೆ ನೂರು ಅಂಕಗಳನ್ನು 82 ಮಕ್ಕಳು ಪಡೆದಿದ್ದಾರೆ. (ಕನ್ನಡ 17, ಗಣಿತ 31, ಜೀವಶಾಸ್ತ್ರ 24, ಕಂಪ್ಯೂಟರ್ ಸೈನ್ಸ್ 2, ರಸಾಯನಶಾಸ್ತ್ರ 6, ಸಂಸ್ಕೃತ 1, ಹಿಂದಿ 1). ಶೇ. 95ಕ್ಕಿಂತ ಅಧಿಕ ಅಂಕ ಪಡೆದವರ ಸಂಖ್ಯೆ 77. ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು 369 ಮಕ್ಕಳು ಪಡೆದಿದ್ದಾರೆ. 612 ಮಕ್ಕಳು ಶೇ. 85 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ.
ಒಟ್ಟು 600ಕ್ಕೆ 591 ಅಂಕ ಗಳಿಸಿರುವ ತರನಂ ಸುಲ್ತಾನ ಇಂಗ್ಲಿಷ್‌ನಲ್ಲಿ 95, ಹಿಂದಿ 100, ಭೌತಶಾಸ್ತ್ರ 96, ರಸಾಯನಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾಳೆ. ಲಾಸ್ಯ ಪಿ. ಶೆಟ್ಟಿ ಇಂಗ್ಲಿಷ್ 96, ಕನ್ನಡ 99, ಭೌತಶಾಸ್ತ್ರ 98, ರಸಾಯನಶಾಸ್ತ್ರ 100, ಗಣಿತಶಾಸ್ತ್ರ 100 ಮತ್ತು ಜೀವಶಾಸ್ತ್ರ 98 ಅಂಕ ಗಳಿಸಿದ್ದಾಳೆ.
ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಆಡಳಿತ ಮಂಡಳಿಯವರು ಹಾಗೂ ಕಾಲೇಜಿನ ಬೋಧಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.