

ದಾವಣಗೆರೆ : ಬೆಣ್ಣೆನಗರಿ ದಾವಣಗೆರೆಯಲ್ಲಿ ಆ asಯೋಜಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ 4ನೇ ರಾಜ್ಯ ಅಧಿವೇಶನಕ್ಕೆ ಭಾನುವಾರ ತೆರೆ ಬಿದ್ದಿತು. ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಎರಡು ದಿನ ನಡೆದ ಅಧಿವೇಶನದಲ್ಲಿ, ಅಚ್ಚಗನ್ನಡದಲ್ಲೇ ಮಾತನಾಡುತ್ತ ನಮ್ಮ ಭಾಷೆಯನ್ನು ಕಾಪಾಡೋಣ ಎಂಬುದೂ ಸೇರಿದಂತೆ 5 ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ನಮ್ಮ ಬರಹದ ಭಾಷೆಯೂ ಕಂಗ್ಲಿಷೇ ಆಗಿದೆ. ನಮ್ಮ ಸಾಹಿತ್ಯವನ್ನೂ ಪರಕೀಯ ಪದ-ವಾಕ್ಯಗಳಿಂದ davanagere, literature. ಓದುಗರನ್ನು ಸೆಳೆಯಲೆಂದು ಸಾಹಿತ್ಯವು ರಸದ ಬದಲು ಕುತೂಹಲವನ್ನಷ್ಟೆ ಉಂಟುಮಾಡುವತ್ತ ಮುಖ ಮಾಡಿದೆ. ಯಾವುದೇ ಸಾಹಿತ್ಯದ ಪ್ರಧಾನ ಸ್ವತ್ವ ರಸ. ನಮ್ಮ ಸಾಹಿತ್ಯ ಬರಹವು ರಸಪ್ರಧಾನ ಆಗಿರುವಂತೆ ಒತ್ತು ಕೊಡೋಣ ಎಂದು ಗೊತ್ತುವಳಿ ಮಂಡಿಸಲಾಯಿತು. ಮಾರುಕಟ್ಟೆಯಲ್ಲಿ ನಿಲ್ಲಲು, ಗೆಲ್ಲಲು ಸಾಹಿತ್ಯವು ಆಕರ್ಷಣೆಯ ಬೆನ್ನೇರಿದೆ. ಇದಕ್ಕಾಗಿ ಶೃಂಗಾರ ರಸದ ಬದಲು ಅಶ್ಲೀಲತೆ, ರೌದ್ರ ರಸದ ಬದಲು ಹಿಂದೆ-ಕ್ರೌರ್ಯ ಇತ್ಯಾದಿ ರಸ ವಿಕೃತಿ ನಡೆದಿದೆ. ಸಾಹಿತ್ಯದಲ್ಲಿ ರಸಶುದ್ಧಿಯನ್ನು ಆಗ್ರಹಿಸೋಣ. ಅಭಾರತೀಯ ಇಲ್ಲವೇ ಭಾರತ ವಿರೋಧಿ ಸಿದ್ಧಾಂತಗಳು ಉಳಿದ ಜ್ಞಾನ ಕ್ಷೇತ್ರದಲ್ಲಿ ವಕ್ಕರಿಸಿದಂತೆ ಸಾಹಿತ್ಯ ಕ್ಷೇತ್ರವನ್ನೂ ಆವರಿಸಿ, ಮನೆ ಬಿರುಕಿನಿಂದ ಹಿಡಿದು ದೇಶವನ್ನು ತುಂಡು ತುಂಡಾಗಿ ನೋಡುವ ತನಕ ಸಾಹಿತ್ಯದಲ್ಲಿ ತನ್ನ ಸಿದ್ಧಾಂತಗಳನ್ನು ನಯವಾಗಿ ಬಿಂಬಿಸುತ್ತಿವೆ. ಇದಕ್ಕಾಗಿ ಅವು ಪ್ರಶಸ್ತಿ, ಹಣ, ವೇದಿಕೆ ಇತ್ಯಾದಿ ದಾರಿಗಳ ಮೂಲಕ ಸಾಹಿತಿಗಳನ್ನು ಆಕರ್ಷಿಸುತ್ತಿವೆ. ಯಾವ ಆಕರ್ಷಣೆಗೂ ಒಳಗಾಗದೇ, ಯಾವ ಸಿದ್ಧಾಂತಕ್ಕೂ ಸಿಲುಕದೇ, ಸಾಹಿತ್ಯದಲ್ಲಿ ಭಾರತೀಯ ಸಂವೇದನೆಯನ್ನು ಧೈರ್ಯ-ಸ್ಥೈರ್ಯಗಳಿಂದ ಅಭಿವ್ಯಕ್ತಿಸೋಣ ಎಂದು ನಿರ್ಣಯ ಕೈಗೊಳ್ಳಲಾಯಿತು. ...