ಒಳ ಮೀಸಲಾತಿ ನಿರ್ಧಾರಕ್ಕೆ ಅಸಮಾಧಾನ

dvg-madiga-samaja.jpg
Published on

ದಾವಣಗೆರೆ  : ಒಳ ಮೀಸಲಾತಿ ಅನುಷ್ಠಾನಕ್ಕೂ ಮುನ್ನ ಲೋಪದೋಷ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಮಾದಿಗ ಸಮುದಾಯ ದಂಗೆ ಏಳಬೇಕಾಗುತ್ತದೆ ಎಂದು ಸಮುದಾಯದ ಮುಖಂಡ ಆಲೂರು ನಿಂಗರಾಜ ಎಚ್ಚರಿಕೆ ನೀಡಿದರು.  ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಮಾದಿಗ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು.  ಸರ್ಕಾರದ ನಿರ್ಧಾರ ಮಾದಿಗ ಜನಾಂಗಕ್ಕೆ ಸಮಾಧಾನ ತಂದಿಲ್ಲ. ಸರ್ಕಾರ ಬಲಗೈ ಸಮುದಾಯದ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.  ಅತಿ ಹಿಂದುಳಿದ ಮಾದಿಗ ಸಮುದಾಯವನ್ನು ಕಡೆಗಣಿಸಲಾಗಿದೆ. ಅತಿ ಹಿಂದುಳಿದ ಶ್ರೇಣೀಕೃತವಾಗಿ ಮಾದಿಗ ಸಮುದಾಯವನ್ನು ಪರಿಗಣಿಸಬೇಕಾಗಿತ್ತು. ಆದರೆ ಬಲಗೈ ಸಮುದಾಯವನ್ನು ಅತಿ ಹಿಂದುಳಿದ ಶ್ರೇಣೀಕೃತ ಮಾಡಿಕೊಂಡಿರುವುದು ಮಾದಿಗ ಸಮುದಾಯಕ್ಕೆ ವಂಚನೆ ಮಾಡಿದಂತಾಗಿದೆ ಎಂದು ಖಂಡನಾ ನಿರ್ಣಯ ತೆಗೆದುಕೊಳ್ಳಲಾಯಿತು.  ಒಳ ಮೀಸಲಾತಿ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸುವ ಮುನ್ನ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡು ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.  ಗಾಂಧಿನಗರದ ಎಂ. ಹಾಲೇಶ್, ಎಚ್. ಮಲ್ಲೇಶ್, ರಾಘವೇಂದ್ರ ಕಡಮನೆ, ಮಂಜು ಪೈಲ್ವಾನ್, ಬಸವರಾಜ್ ಸಾಗರ್, ಚಿದಾನಂದಪ್ಪ, ರವಿ ಮಲ್ಲಪ್ಪ, ಉದಯ ಪ್ರಕಾಶ್, ಚಿದಾನಂದಪ್ಪ, ಚಿಕ್ಕನಹಳ್ಳಿ ಲಿಂಗರಾಜ್, ದುಶ್ಯಂತ್, ಬಿ. ದುಗ್ಗಪ್ಪ, ಆಂಜಿನಪ್ಪ, ಪ್ರಕಾಶ್, ಶಿವಶಂಕರ್, ಎಸ್.ಎಂ. ಹಾಲೇಶ್ ಕುಮಾರ್, ಪ್ರದೀಪ್, ವಸಂತ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net