ರೂಬಿಕ್ ಕ್ಯೂಬಿಕ್ ಮೊಸಾಯಿಕ್ ಆಟದಲ್ಲಿ ಗಿನ್ನೆಸ್ ದಾಖಲೆ

dvg-Guru-kiran-Copy.jpg
Published on

ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ವಾಸನ ಗ್ರಾಮದ ಬಾಲಕ ಆರ್. ಗುರುಕಿರಣ್, ರೂಬಿಕ್ ಕ್ಯೂಬಿಕ್ ಮೊಸಾಯಿಕ್ ಆಟದಲ್ಲಿ

ಗಿನ್ನೆಸ್ ದಾಖಲೆಯ ಸಾಧನೆ ಮಾಡಿದ್ದಾನೆ ಎಂದು, ಅಖಿಲ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಕೆ.ವೈ. ತಿಪ್ಪೇಸ್ವಾಮಿ ಹೇಳಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಯಾದ ಗುರುಕಿರಣ್, ಅ. 1ರಂದು ತಮ್ಮ ಶಾಲೆಯಲ್ಲಿ ನಡೆದ ರೂಬಿಕ್ ಕ್ಯೂಬಿಕ್ ಮೊಸಾಯಿಕ್ ಆಟದಲ್ಲಿ ದಾಖಲೆ ಮಾಡಿದ್ದಾಗಿ ತಿಳಿಸಿದರು.  ಆಟದಲ್ಲಿ 20 ಜನ ಭಾಗವಹಿಸಿದ್ದರು. ಗುರುಕಿರಣ್ ಕೇವಲ 45 ಸೆಕೆಂಡ್‌ನಲ್ಲಿ ಆಟ ಮುಗಿಸಿ ಗಮನ ಸೆಳೆದಿದ್ದಾನೆ. ಗಿನ್ನೀಸ್ ವಿಶ್ವ ದಾಖಲೆ ಸಂಸ್ಥೆಯವರು ಶಾಲೆಗೆ ಬಂದು ಮೆಡಲ್ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ, ಗಿನ್ನೀಸ್ ದಾಖಲೆ ಪುಸ್ತಕದಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದರು.  ಗುರುಕಿರಣ್ ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಾಸನ ಗ್ರಾಮದವರಾಗಿದ್ದು ಇವರ ತಂದೆ ಕೆ. ರಾಜು ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.  ಗುರುಕಿರಣ್, ತಂದೆ  ರಾಜಪ್ಪ,  ಕೆ.ಆರ್.ಬಸವರಾಜ್, ಚೌಡಮ್ಮ ಸುದ್ದಿಗೋಷ್ಠಿಯಲ್ಲಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net