ರಾಘವೇಂದ್ರ ಸಪ್ತಾಹಕ್ಕೆ ಯತಿಗಳಿಗೆ ಆಹ್ವಾನ

dvg-udupi-20.jpg
Published on

ದಾವಣಗೆರೆ : ನಗರದಲ್ಲಿ 2024ರ ಮಾರ್ಚ್ 11 ರಿಂದ 17ರ ವರೆಗೆ ನಡೆಯಲಿರುವ 31ನೇ ರಾಘವೇಂದ್ರ ಸಪ್ತಾಹ ಕಾರ್ಯಕ್ರಮಕ್ಕೆ ಯತಿಗಳನ್ನು ಆಹ್ವಾನಿಸಲು ರಾಘವೇಂದ್ರ ಸಪ್ತಾಹ ಸಮಿತಿಯ ಸದಸ್ಯರು ಸೋಮವಾರ ಉಡುಪಿಗೆ ಭೇಟಿ ನೀಡಿದ್ದರು.
 ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರ ದರ್ಶನ ಪಡೆದ ಸಮಿತಿಯ ಸದಸ್ಯರು, ದಾವಣಗೆರೆಯಲ್ಲಿ ನಡೆಯಲಿರುವ ರಾಘವೇಂದ್ರ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಇದೇ ವೇಳೆ ಕೃಷ್ಣಾಪುರ ಮಠದ ಶ್ರೀ ಲಕ್ಷ್ಮೀಸಾಗರ ತೀರ್ಥರ ಆಶೀರ್ವಾದವನ್ನು ಪಡೆಯಲಾಯಿತು.
 ಕಂಪ್ಲಿ ಗುರುರಾಜಾಚಾರ್, ಡಾ. ಶಶಿಕಾಂತ್, ನಾಗಭೂಷಣ್, ನಾಗರಾಜ, ರಾಜಣ್ಣ, ಪಿ.ಕೆ. ಪ್ರಕಾಶ್, ಕಡೂರು ಪ್ರಾಣೇಶಾಚಾರ್, ಪಲ್ಲಕ್ಕಿ ವಾಸುದೇವಾಚಾರ್ ಮತ್ತು ರಘುನಾಥರಾವ್ ಉಡುಪಿಗೆ ಭೇಟಿ ನೀಡಿದ ನಿಯೋಗದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net