

ದಾವಣಗೆರೆ : ನಗರದ ಪಿ.ಜೆ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ, ಲೋಕ ಕಲ್ಯಾಣಾರ್ಥವಾಗಿ ಬೃಹತಿ ಸಹಸ್ರ ಯಾಗವನ್ನು ಆಯೋಜಿಸಲಾಗಿತ್ತು. ಯಾಗದ ಸಾರಥ್ಯವನ್ನು ವೇದಪಂಡಿತ ಜಯತೀರ್ಥಾಚಾರ್ ವಡೇರ್ ವಹಿಸಿದ್ದರು. ವೆಂಕಟರಮಣ ಕಟ್ಟಿ ದಂಪತಿ ಕರ್ತೃಗಳಾಗಿ ಪಾಲ್ಗೊಂಡಿದ್ದರು. ಸುತೀರ್ಥ ಕಟ್ಟಿ, ರಾಮ ಗೋಪಾಲ ಕಟ್ಟಿ, ವೆಂಕಟ ಗಿರೀಶಾಚಾರ್, ಪಾಂಡುರಂಗಾಚಾರ್ ಮಣ್ಣೂರು, ಪುರಂದರಾಚಾರ್ ಹಯಗ್ರೀವ, ನರಸಿಂಹಾಚಾರ್ ಮಣ್ಣೂರು, ಗುರುರಾಜಾಚಾರ್ ಮಣ್ಣೂರು ಭಾಗವಹಿಸಿದ್ದರು. ವಕೀಲ ಬದರಿಪ್ರಸಾದ್, ರಘುನಾಥ್, ಬದರೀನಾರಾಯಣ್, ಪ್ರಕಾಶ ನಾಡಿಗೇರ್, ವಿಜಯ ಕುಮಾರ್ ಕಲಮದಾನಿ, ಬದರೀಶ ದೇವಳೆ, ಜಿ.ಕೆ. ಸುರೇಶ್, ಎಂ.ಬಿ. ಬದರೀನಾಥ್, ಸುಶಿಲೇಂದ್ರ ದೇವಳೆ, ಪಿ.ಎಂ. ಬದರಿನಾರಾಯಣ ರಾವ್, ಸತೀಶ್ ಬಂಡೀವಾಡ್, ಗುರುರಾಜ್ ಯಾನೆ ರಾಜಣ್ಣ ಸೇರಿ ಮುನ್ನೂರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.