ರಾಯರ ಪೂರ್ವಾರಾಧನೆ ಸುಸಂಪನ್ನ

IMG-20250810-WA0022.jpg
Published on

ದಾವಣಗೆರೆ  : ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆಯನ್ನು ನಗರದ ಪಿ.ಜೆ. ಬಡಾವಣೆ ಹಾಗೂ ದೀಕ್ಷಿತ್ ರಸ್ತೆಯ ಮಠಗಳಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.  ಉಭಯ ಮಠಗಳಲ್ಲೂ ರಾಯರ ವೃಂದಾವನಕ್ಕೆ ಬಗೆ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಯರ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಗುರು ಸಾರ್ವಭೌಮರ ದರ್ಶನ ಪಡೆದರು.  ದೀಕ್ಷಿತ್ ರಸ್ತೆಯ ರಾಯರ ಮಠದಲ್ಲಿ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ನಂತರ ಫಲ ಪಂಚಾಮೃತ, ಶ್ರೀಹರಿ ವಾಯುಸ್ತುತಿ ಪಾರಾಯಣ, ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ತರ ಪಾರಾಯಣ, ಶ್ರೀಮಠದಲ್ಲಿ ಕನಕಾಭಿಷೇಕ, ಪಾದಪೂಜೆ ನೆರವೇರಿದವು.  ಬೆಳಗ್ಗೆ 10ಕ್ಕೆ ಪಂಡಿತರಿಂದ ಉಪನ್ಯಾಸ, 11ಕ್ಕೆ ಮಹಾ ನೈವೇದ್ಯ, ಮಂಗಳಾರತಿ, ತೀರ್ಥ ಪ್ರಸಾದ ಆಯೋಜಿಸಲಾಗಿತ್ತು. ಸಂಜೆ 5 ರಿಂದ ದೀವುಟಗಿ ಸೇವೆ, ನಂತರ ಪ್ರಾಕಾರ ರಥೋತ್ಸವ, ಅಷ್ಟಾವಧಾನ, ಮಹಾ ಮಂಗಳಾರತಿ ನೆರವೇರಿಸಲಾಯಿತು.  ನಮನ ಅಕಾಡೆಮಿಯ ಮಾಧವಿ ಗೋಪಾಲಕೃಷ್ಣ ಮತ್ತು ಶಿಷ್ಯ ವೃಂದದಿಂದ ‘ಕೃಷ್ಣ ವಿಲಾಸಂ’ ನೃತ್ಯ ರೂಪಕ ಪ್ರದರ್ಶನ ಆಕರ್ಷಕವಾಗಿತ್ತು.  ಪಿ.ಜೆ. ಬಡಾವಣೆ ರಾಯರ ಮಠದಲ್ಲೂ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಫಲ, ಪಂಚಾಮೃತ ಅಭಿಷೇಕ, ಸ್ತೋತ್ರ ಪಾರಾಯಣ, ಅಲಂಕಾರ ಪೂಜೆ, ಗುರುಗಳ ಪಾದಪೂಜೆ, ಉಪನ್ಯಾಸ, ಭಜನೆ, ಪಲ್ಲಕ್ಕಿ ಉತ್ಸವ, ಮಹಾ ಮಂಗಳಾರತಿ, ತೀರ್ಥ-ಪ್ರಸಾದ. ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾ ಮಂಗಳಾರತಿ ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net