ರಾಯರ ಮಠದಲ್ಲಿ ಧ್ವಜಾರೋಹಣ, ಧಾನ್ಯಪೂಜೆ

IMG-20250809-WA0083.jpg
Published on

ದಾವಣಗೆರೆ  : ಶ್ರೀ ಗುರುರಾಯರ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ನಗರದ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಗೋಪೂಜೆ, ಧ್ವಜಾರೋಹಣ, ಲಕ್ಷ್ಮಿಪೂಜೆ, ಧಾನ್ಯ ಪೂಜೆಯು ಪಂಡಿತ ಕಡೂರು ಪ್ರಾಣೇಶಾಚಾರ್ ನೇತೃತ್ವದಲ್ಲಿ ನೆರವೇರಿತು.  ಸಂಜೆ ಒಂದೂವರೆ ಗಂಟೆ ಕಾಲ ವಿದ್ವಾನ್ ರಾಜಗೋಪಾಲ ಭಾಗವತರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಿರಣ್ ಕುಮಾರ್ ಮೃದಂಗ ಸಾಥ್ ನೀಡಿದರು. ಶ್ರೀಕಾಂತ ಮೈಸೂರು ವಯೋಲಿನ್ ಸಾಥ್ ನೀಡಿದರು. ವಿದ್ವಾನ್ ವಿಶ್ವಂಭರ ಭಾಗವತ ಅವರು ಗಣೇಶ ಸ್ತುತಿ ಹಾಡಿದರು.  ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೋಸಾ ಪ್ರಸನ್ನ ಕುಮಾರ್, ಕಾರ್ಯದರ್ಶಿ ಎನ್.ಎಸ್. ರಾವ್, ಖಜಾಂಚಿ ಎಂ. ವಾಗೀಶಾಚಾರ್, ವಾಚಸ್ಪತಿ ಆಚಾರ್, ಆರ್.ಜಿ. ಕುಲಕರ್ಣಿ, ಶ್ರೀನಿವಾಸ ನರಗನಹಳ್ಳಿ, ಪ್ರಹ್ಲಾದ ನರಗನಹಳ್ಳಿ, ರಾಘವೇಂದ್ರ ಕುಲಕರ್ಣಿ, ಪ್ರವೀಣ್, ಪ್ರಕಾಶ ಮತ್ತು ನೂರಾರು ಭಕ್ತರು ಭಾಗವಹಿಸಿದ್ದರು. ಡಾ.ಸಿ.ಕೆ. ಆನಂದತೀರ್ಥಾಚಾರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net