

ದಾವಣಗೆರೆ : ನಗರದ ಪಿ.ಜೆ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಈ ಬಾರಿ 75 ನೇ ಆರಾಧನೆಯನ್ನು ಆ. 10 ರಿಂದ 12 ರ ವರೆಗೆ ಆಚರಿಸಲಾಗುತ್ತಿದೆ. ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ಮೇ 29 ರಿಂದ 75 ದಿನಗಳ ವರೆಗೆ ಮಠದ ಪ್ರಧಾನ ಅರ್ಚಕ ಕೃಷ್ಣಾಚಾರ್ಯ ಮಣ್ಣೂರ್ ಅವರ ಮಾರ್ಗದರ್ಶನದಲ್ಲಿ ರಾಯರ ಅಷ್ಟೋತ್ತರ ಕೈಂಕರ್ಯವನ್ನು ಶ್ರೀಮಠದ ಭಕ್ತರು ನಡೆಸಿಕೊಂಡು ಬರುತ್ತಿದ್ದಾರೆ. ಕಲಂದಾನಿ ವಿಜಯಕುಮಾರ್, ವಕೀಲ ವೆಂಕಟೇಶ್, ಸುಶಿಲೇಂದ್ರ ದೇವಳೆ, ಪ್ರಕಾಶ್ ನಾಡಿಗೇರ್, ಎಂ.ಬಿ. ಬದರಿನಾಥ್, ರಂಗನಾಥ್, ನಾಗರಾಜ್, ಕೃಷ್ಣಮೂರ್ತಿ, ಅನಂತರಾಮ್, ಕಾಶೀನಾಥ್, ಸಂಜಯ್ ಈ ಸೇವೆಯಲ್ಲಿ ಭಾಗವಹಿಸಿದ್ದಾರೆ. ಮಠದ ಭಕ್ತರಾದ ಬಸವರಾಜ್, ಜ್ಯೋತಿ, ರಕ್ಷಿತಾ ಹಾಗೂ ಲಕ್ಷ್ಮೀ ಪಾಲ್ಗೊಂಡಿದ್ದಾರೆ.