ರಾಯರ ಆರಾಧನಾ ಮಹೋತ್ಸವ

rayaru.jpg
Published on

ದಾವಣಗೆರೆ : ನಗರದ ಕೆಬಿ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ರಾಯರ ಆರಾಧನಾ ಮಹೋತ್ಸವ ನಡೆಯಲಿದೆ.  ಮಹೋತ್ಸವದ ಪೂರ್ವಭಾವಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಭಾನುವಾರ ಶ್ರೀ ಹರಿವಾಯುಸ್ತುತಿ ಪಾರಾಯಣ, ರಾಘವೇಂದ್ರ ಸ್ತ್ರೋತ್ರ, ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ, ಪ್ರಾಕಾರ ರಥೋತ್ಸವ, ಅಷ್ಟಾವಧಾನ ಕಾರ್ಯಕ್ರಮ ನಡೆದವು.  ಸೋಮವಾರ ಸಂಜೆ 6 ರಿಂದ ಗೋಪೂಜೆ, ಧ್ವಜಾರೋಹಣ, ಲಕ್ಷ್ಮೀ ಪೂಜೆ, ಧಾನ್ಯ ಪೂಜೆ ಬಳಿಕ ರಥೋತ್ಸವ ಜರುಗಲಿದೆ.  ಆ.20 ರಂದು ಶ್ರೀ ಗುರುರಾಯರ ಪೂರ್ವಾರಾಧನೆ ನಡೆಯಲಿದ್ದು ಅಂದು ಸಂಜೆ 7 ರಿಂದ ನಮನ ಅಕಾಡೆಮಿಯ ಮಾಧವಿ ಗೋಪಾಲಕೃಷ್ಣ ಮತ್ತು ಶಿಷ್ಯವೃಂದದಿಂದ ಭರತನಾಟ್ಯ ಪ್ರದರ್ಶನವಿದೆ.  ಆ.21 ರಂದು ಮಧ್ಯಾರಾಧನೆ ಪ್ರಯುಕ್ತ ಸಂಜೆ 6 ರಿಂದ ರಥೋತ್ಸವ, ಅಷ್ಟಾವಧಾನ, 7 ರಿಂದ ಸಂಜೀವ ಜೋಶಿ ಮತ್ತು ತಂಡದವರಿಂದ ಹರಿದಾಸ ವಾಣಿ ಆಯೋಜಿಸಲಾಗಿದೆ.  ಆ.22 ರಂದು ಉತ್ತರಾರಾಧನೆ ಪ್ರಯುಕ್ತ ಬೆಳಗ್ಗೆ 10.30 ರಿಂದ ಶ್ರೀ ಮಂತ್ರಾಲಯ ಪ್ರಭುಗಳು ರಚಿಸಿರುವ ಶ್ರೀ ಮನ್ಯಾಯ ಸುಧಾ ಪರಿಮಳ ಗ್ರಂಥದೊಂದಿಗೆ ನಗರದ ರಾಜಬೀದಿಗಳಲ್ಲಿ ಶ್ರೀ ಗುರು ಸಾರ್ವಭೌಮರ ಮಹಾರಥೋತ್ಸವ ನಡೆಯಲಿದೆ.  ಅಂದು ಸಂಜೆ 6 ಕ್ಕೆ ಶುಭದಾ ಮತ್ತು ತಂಡದ 30 ಜನರಿಂದ ವೀಣಾವಾದನ ನಡೆಯಲಿದೆ. ಭಕ್ತರು ಆಗಮಿಸಿ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗುರುರಾಜ ಸೇವಾ ಸಂಘದ ಪ್ರಕಟಣೆ ತಿಳಿಸಿದೆ.  ---  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net