ಶ್ರೀ ರಾಘವೇಂದ್ರ ಸಪ್ತಾಹ ಆಚರಣೆಗೆ ಸಮಿತಿಗಳ ರಚನೆ

IMG-20230813-WA0043.jpg
Published on

ದಾವಣಗೆರೆ : ನಗರದಲ್ಲಿ 2024ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಆಯೋಜನೆಗಾಗಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಸಂಪನ್ನ ಮುತಾಲಿಕ್ ಆಯ್ಕೆಯಾಗಿದ್ದಾರೆ.
 ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ನಡೆದ 2ನೇ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
 ಏಳು ದಿನಗಳ ಈ ಕಾರ್ಯಕ್ರಮವನ್ನು ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ರಾಜ್ಯದ ವಿವಿಧ ಭಜನಾ ಮಂಡಳಿಗಳ ಸದಸ್ಯರು, ಪಂಡಿತರು, ಮಠಾಧೀಶರು ಭಾಗವಹಿಸಲಿದ್ದಾರೆ.
 ಸಪ್ತಾಹದ ಅಂಗವಾಗಿ ಲಕ್ಷ್ಮೀ ಶೋಭಾನ, ಕುಂಕುಮಾರ್ಚನೆ, ಗುರುಗಳ ಉಪನ್ಯಾಸ, ರಾಯರ ಜೀವನ ಚರಿತ್ರೆಯನ್ನು ತಿಳಿಸುವ ರೂಪಕವನ್ನು ಪ್ರದರ್ಶಿಸಲು ನಿರ್ಧರಿಸಲಾಯಿತು. ಆರೋಗ್ಯ ಶಿಬಿರ ಮಾಡಬಹುದು ಎಂಬ ಸಲಹೆಯೂ ಕೇಳಿಬಂದಿತು.
 ಇದೇ ವೇಳೆ ರಾಘವೇಂದ್ರ ಸಪ್ತಾಹ ಮಹೋತ್ಸವ ಕುರಿತ ಮನವಿ ಪತ್ರವನ್ನು ಸಂಪನ್ನ ಮುತಾಲಿಕ್ ಬಿಡುಗಡೆ ಮಾಡಿದರು. ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಶಶಿಕಾಂತ, ಎಸ್.ಜಿ. ಕುಲಕರ್ಣಿ ಇದ್ದರು. ಕಂಪ್ಲಿ ಗುರುರಾಜಾಚಾರ್ ನಿರೂಪಿಸಿದರು. ಸಮಾಜದ ಮುಖಂಡರು ಇದ್ದರು.
 ವಿವಿಧ ಸಮಿತಿಗಳ ರಚನೆಗೆ ಚಾಲನೆ ನೀಡಲಾಗಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಂತರ ಉಪ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು.
 ...
 * ಸಮಿತಿಯ ಪದಾಧಿಕಾರಿಗಳು
 ಕೋಸಾ ಪ್ರಸನ್ನ (ಉಪಾಧ್ಯಕ್ಷ), ಎ. ವಿಠ್ಠಲ್ (ಗೌರವ ಅಧ್ಯಕ್ಷ), ಡಾ. ಶಶಿಕಾಂತ, ಬದರಿನಾರಾಯಣ, ರಘುನಾಥ ರಾವ್ (ಖಜಾಂಚಿಗಳು). ಕಂಪ್ಲಿ ಗುರುರಾಜಾಚಾರ್ (ಕಾರ್ಯದರ್ಶಿ ಮತ್ತು ಸಂಚಾಲಕ). ಎಸ್.ಜಿ. ಕುಲಕರ್ಣಿ, ನಾಗಭೂಷಣ (ಸಹ ಕಾರ್ಯದರ್ಶಿಗಳು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net