

ದಾವಣಗೆರೆ : ಚನ್ನಗಿರಿ ತಾಲೂಕು ದೊಡ್ಡಘಟ್ಟ ಗ್ರಾಮದ ಶ್ರೀ ಕರಿಯಾಂಬಿಕಾ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಬುಧವಾರ ದೇವತೆಯ ಉಚ್ಚಾಯ ಕಾರ್ಯಕ್ರಮ ನೆರವೇರಿತ್ತು. ಶುಕ್ರವಾರ ಬೆಳಗ್ಗೆಯಿಂದ ಶ್ರೀ ಕರಿಯಾಂಬಿಕಾ ದೇವಿಗೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ. ಸಂಜೆ 5.30 ರಿಂದ ದೇವರ ಸಿಡಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಜಾತ್ರೆ ಅಂಗವಾಗಿ ಗ್ರಾಮದ ಬೀದಿಗಳನ್ನು ಹಸಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.