ಬಾಪೂಜಿ ಎಂ.ಬಿ.ಎ ಕಾಲೇಜಿಗೆ 6 ರ‌್ಯಾಂಕ್

dvg-Akshata-C.-Mudagal-bapuji-mba.jpg
Published on

ದಾವಣಗೆರೆ : ಇತ್ತೀಚೆಗೆ ನಡೆದ ದಾವಣಗೆರೆ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಎಂ.ಬಿ.ಎ ಸ್ನಾತಕೋತ್ತರ ವಿಭಾಗದಲ್ಲಿ ನಗರದ ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜಮೆಂಟ್ ಆ್ಯಂಡ್ ರಿಸರ್ಚ್‌ನ 6 ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದಾರೆ.  ಅಕ್ಷತಾ ಸಿ. ಮುದಗಲ್ (2ನೇ ರ‌್ಯಾಂಕ್), ರೂಪಾ ಚಿಗಟೇರಿ (3ನೇ ರ‌್ಯಾಂಕ್), ಟಿ.ಎಲ್. ವಿದ್ಯಾಶ್ರೀ (4ನೇ ರ‌್ಯಾಂಕ್), ಕೆ.ಎಸ್. ಮೇಘನಾ (6ನೇ ರ‌್ಯಾಂಕ್), ನಿಖಿತಾ (7ನೇ ರ‌್ಯಾಂಕ್) ಮತ್ತು ಪಿ. ಸತ್ಯಹಾರಿಕ (10ನೇ ರ‌್ಯಾಂಕ್) ಪಡೆದಿದ್ದಾರೆ.  ವಿದ್ಯಾರ್ಥಿನಿಯರ ಈ ಸಾಧನೆಗೆ ಬಾಪೂಜಿ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ್, ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ, ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಮತ್ತು ಬೋಧಕ, ಬೋಧಕೇತರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net