ಗಮನ ಸೆಳೆದ ಮಹಿಳಾ ಬೈಕ್ ರ‌್ಯಾಲಿ

dvg-bike-rally.jpg
Published on

ದಾವಣಗೆರೆ :  ಸಾರ್ವಜನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ನಗರದಲ್ಲಿ ಭಾನುವಾರ ಮಹಿಳಾ ಬೈಕ್ ರ‌್ಯಾಲಿಯನ್ನು ಆಯೋಜಿಸಲಾಗಿತ್ತು.  ರ‌್ಯಾಲಿಗೆ ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಮಲ್ಲಮ್ಮ ಚೋಬೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ರ‌್ಯಾಲಿಯು ನಗರದ ವಿವಿಧ ಬೀದಿಗಳಲ್ಲಿ ಸಾಗಿ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಅಂತ್ಯಗೊಂಡಿತು.  ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮಹಿಳೆಯರು ಕೇಸರಿ ಪೇಟಾ ಧರಿಸಿದ್ದು ಗಮನ ಸೆಳೆಯಿತು. ಜೈ ಶ್ರೀರಾಂ, ಜೈ ಶಿವಾಜಿ ಜೈ ಭವಾನಿ, ಭಾರತ್ ಮಾತಾ ಕಿ ಜೈ, ನಾವೆಲ್ಲ ಹಿಂದು, ನಾವೆಲ್ಲ ಒಂದು ಎಂಬ ಘೋಷಣೆಗಳನ್ನು ಕೂಗಿದರು.  ಚೇತನಾ, ಪುಷ್ಪಾ ವಾಲಿ, ಸಿ.ಪಿ. ಅನಿತಾ, ಜ್ಯೋತಿ, ಹೇಮಾ, ಸವಿತಾ, ಸುಶೀಲಮ್ಮ, ಶ್ರಾವಣಿ, ಐಶ್ವರ್ಯಾ, ಪೂಜಾ, ಸೀಮಾ, ಮುಖಂಡರಾದ ಶಿವಪ್ರಸಾದ್, ಧನುಷ್, ವಿಶ್ವಾಸ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net